ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಕುಂದಗೋಳ: ಕನಕದಾಸರ ಪಂದ್ಯ ಒಂದಿದೆ 'ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ'... ಅಬ್ಬಾ ಈ ಹಾಡು ಅಂದು ಇಂದು ಎಂದಿಗೂ ಪ್ರಸ್ತುತ ಎಂಬುದಕ್ಕೆ ಈ ಬಾಲಕಿಯ ಹಗ್ಗದ ಮೇಲಿನ ನಡಿಗೆಯೇ ಸಾಕ್ಷಿಯಾಗಿದೆ.

ಹೌದು! ಕೈಯಲ್ಲೊಂದು ಕೋಲು ಹಿಡಿದು ತಲೆ ಮೇಲೆ ತಾಮ್ರದ ತಂಬಿಗೆ ಹೊತ್ತು ಹಗ್ಗದ ಮೇಲೆ ನಡೆಯುವ ಬಾಲಕಿ. ಆ ಕ್ಷಣದಲ್ಲೇ ಪುನಃ ಬದಲಾಗಿ ಖಾಲಿ ತಟ್ಟೆ ಹಿಡಿದು ಮಂಡಿಯೂರಿ ನಡೆಯುತ್ತಾಳೆ. ಆ ನೋಟ ನಮ್ಮನ್ನು ಸೆಳೆಯುವ ಮೊದಲೇ ಸೈಕಲ್ ಚಕ್ರದ ಮೇಲೆ ಕಾಲನ್ನಿಟ್ಟು ಚಕ್ರ ತಿರುಗಿಸುತ್ತಾ ಹಗ್ಗದ ಮೇಲೆ ನಡೆಯುತ್ತಾಳೆ ಈ ಎಲ್ಲ ನೋಟ ನೋಡುಗರ ಮೈ ಜುಂ ಎನಿಸಿದೇ ಇರಲು ಸಾಧ್ಯವೇ ಇಲ್ಲಾ ಬಿಡಿ.

ಅಸಲಿಗೆ ಈ ಬಾಲಕಿ ಹೀಗೆ ಹಗ್ಗದ ಮೇಲೆ ಹೀಗೆ ನಡೆಯುತ್ತಿರುವುದು ಬದುಕಿನ ಬಂಡಿ ಎಳೆಯಲು. ಕನಿಷ್ಠ ಆರು ವರ್ಷದ ಈ ಕೂಸು ಶಾಲೆಗೆ ಹೋಗದೆ ತನ್ನ ಬದುಕನ್ನು ಹಗ್ಗದ ಮೇಲಿನ ನಡಿಗೆಗೆ ಕುಟುಂಬದ ನಿರ್ವಹಣೆಗೆ ಮೀಸಲಿಟ್ಟಿದೆ.

ಛತ್ತಿಗಘಡ್'ದಿಂದ ಬಂದ ಈ ಕುಟುಂಬ ಹಗ್ಗದ ಮೇಲಿನ ನಡಿಗೆಯ ಆಟ ಮಾಡುತ್ತಾ ಇಂದು ಕುಂದಗೋಳ ತಲುಪಿ ತಮ್ಮ ಆಟ ಪ್ರದರ್ಶಿಸಿದೆ. ಇಂದು ಈ ಊರು ನಾಳೆ ಆ ಊರು ಎನ್ನುವ ಇವರಿಗೆ ಸೂರಿಲ್ಲ, ಬ್ಯಾಂಕ್ ಖಾತೆ ಇಲ್ಲ, ಶಿಕ್ಷಣ ಇಲ್ಲ, ಎಲ್ಲದಕ್ಕೂ ಮಿಗಿಲಾಗಿ ಈ ಆಟ ಬಿಟ್ರೇ ಇವರ ಹೊಟ್ಟೆಗೆ ಹಿಟ್ಟಿಲ್ಲಾ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/10/2022 06:32 pm

Cinque Terre

59.89 K

Cinque Terre

0

ಸಂಬಂಧಿತ ಸುದ್ದಿ