ಕುಂದಗೋಳ: ಹಾವು ಕಂಡ್ರೆ ಮಾರುದ್ಧ ಓಡಿ ಹೋಗವವರ ನಡುವೆ ಇಲ್ಲೋಬ್ಬ ಯುವಕ ಹಾವು ಕಂಡರೆ ಸಾಕು ಓಡೋಡಿ ಬಂದು ಹಾವನ್ನು ಹಿಡಿದು ರಕ್ಷಣೆ ಮಾಡ್ತಾ ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆ ಉರಗ ರಕ್ಷಕ ಎಂದೇ ಚಿರಪರಿಚಿತನಾಗಿದ್ದಾನೆ.
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಮಂಜುನಾಥ ಮೆಣಸಿನಕಾಯಿಗೆ ಹಾವು ರಕ್ಷಣೆ ಮಾಡುವುದು ಒಂದು ಹವ್ಯಾಸವಾಗಿ ಬೆಳೆದಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ಇದಲ್ಲದೆ ಮೆಟ್ರಿಕ್, ಐಟಿಐ ಶಿಕ್ಷಣ ಪೂರೈಸಿರುವ ಮಂಜುನಾಥ ಖಾಸಗಿ ಕೆಲಸ ಮಾಡುತ್ತಿದ್ದು, ತನ್ನದೇ ಒಂದು ಹನಿ ಹನಿ ಮನಸಿನ ಮಾತು ಎಂಬ ಕವನ ಸಂಕಲನ ಪ್ರಕಟಿಸಿ ಕರುನಾಡ ಸಾಹಿತ್ಯ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈಗಾಗಲೇ ಕುಂದಗೋಳ ತಾಲೂಕಿನಾದ್ಯಂತ ಸರಿ ಸುಮಾರು ವಿವಿಧ ಜಾತಿಯ 3 ಸಾವಿರ ಹಾವುಗಳನ್ನು ಹಿಡಿದ ಮಂಜುನಾಥ ಬಸವಣ್ಣನವರ ವಚನದಂತೆ ಕಲ್ಲು ನಾಗರ ಕಂಡರೆ ಹಾಲೆರೆವರಯ್ಯ ದಿಟ ನಾಗರ ಕಂಡರೆ ಕೊಲ್ಲಂಬರೆಯ್ಯ ಎಂಬ ಮನುಷ್ಯರ ಮನಸ್ಥಿತಿ ಬದಲಿಸಿ ಹಾವನ್ನು ರಕ್ಷಿಸುವ ಮಂಜುನಾಥ ಮೆಣಸಿನಕಾಯಿ ಸಂಪರ್ಕ ಮಾಡಲು ಈ ಮೊಬೈಲ್ ಸಂಖ್ಯೆ 9019213507 ಗೆ ಕರೆ ಮಾಡಿರಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2022 02:11 pm