ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 12 ವರ್ಷವಾದರೂ ರೂಪುರೇಷೆ ಸಿದ್ಧಗೊಂಡಿಲ್ಲ; 'ಸುಪ್ರೀಂ' ತೀರ್ಪು ಬಂದರೂ ನಿರ್ಲಕ್ಷ್ಯ

ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯ ಪಾಲಿಕೆ ಜಾಗ ಬಳಕೆಗೆ ದಿಕ್ಕು ದೆಸೆ ಇಲ್ಲದಂತಾಗಿದೆ. 12 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ ಎಚ್ಚೆತ್ತುಕೊಳ್ಳದ ಮಹಾನಗರ ಪಾಲಿಕೆ. ಕಿತ್ತೂರು ಚೆನ್ನಮ್ಮ ಸರ್ಕಲ್‌ಗೆ ಹೊಂದಿಕೊಂಡಿರುವ ಸಾರ್ವಜನಿಕ ಮೈದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ.

ಸಾರ್ವಜನಿಕ ಮೈದಾನ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯನ್ನು ಇದುವರೆಗೆ ಮಾಡದೇ ಇರುವುದರಿಂದ ಹೊಸ ಹೊಸ ವಿವಾದಗಳು ಸೃಷ್ಟಿಯಾಗುತ್ತಿವೆ. ಪ್ರಸಕ್ತ ಮೈದಾನ ಪಾಲಿಕೆ ಹಾಗೂ ಸರ್ಕಾರದ ಸುಪರ್ದಿಗೆ ಬಂದು ಹನ್ನೆರಡು ವರ್ಷಗಳು ಕಳೆದಿವೆ. ಆದ್ರೂ ಇದನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ಯೋಜನೆಯನ್ನು ರೂಪಿಸಿಲ್ಲ.

ಮಹಾನಗರ ಪಾಲಿಕೆಯಲ್ಲಿ ಹತ್ತು-ಹದಿನೈದು ವರ್ಷದಿಂದ ಬಿಜೆಪಿ ಆಡಳಿತವೇ ಇದೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಆಡಳಿತವೇ ಇದೆ. ಆದರೆ ಈ ಮೈದಾನದ ಬಳಕೆಯಲ್ಲಿ ಕುರಿತಾದ ಸ್ಪಷ್ಟ ನೀತಿಯನ್ನು ಸಂಬಂಧಿಸಿದವರು ರೂಪಿಸಲಿಲ್ಲ. ಈಗಿಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವುದಾಗಿ ಕೆಲವರು ಪಟ್ಟು ಹಿಡಿದು ಅನುಮತಿಗೆ ಒತ್ತಾಯಿಸುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಮೈದಾನವನ್ನು ವರ್ಷದಲ್ಲಿ ಎರಡು ಬಾರಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಗೆ ನೀಡಬೇಕು. ಉಳಿದಂತೆ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದ್ರೆ, ತೀರ್ಪು ಬಂದು ಇಷ್ಟು ವರ್ಷಗಳಾದರೂ ಏಕೆ ಬಳಕೆ ಕುರಿತಾದ ನೀತಿ ನಿರೂಪಣೆ ಮಾಡಿಲ್ಲ ಎಂಬ ಪ್ರಶ್ನೆ ಮೂಡಿದೆ.

Edited By : Shivu K
Kshetra Samachara

Kshetra Samachara

27/08/2022 04:30 pm

Cinque Terre

41.03 K

Cinque Terre

1

ಸಂಬಂಧಿತ ಸುದ್ದಿ