ಧಾರವಾಡ: ಹಿಜಾಬ್ ಹಾಗೂ ಕೇಸರಿ ಶಾಲಿನ ಗದ್ದಲ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಹೇಳುತ್ತಿದ್ದು, ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪರೇಡ್ ನಡೆಸುತ್ತಿದ್ದಾರೆ.
ಹುಬ್ಬಳ್ಳಿ, ಧಾರವಾಡ ಮಹಾನಗರಗಳಲ್ಲೂ ಪೊಲೀಸ್ ಕಮೀಷನರೇಟ್ ವತಿಯಿಂದ ಪರೇಡ್ ನಡೆಸಲಾಗಿದ್ದು, ಇದೀಗ ಜಿಲ್ಲಾ ಪೊಲೀಸರಿಂದಲೂ ಹಳ್ಳಿ ಹಳ್ಳಿಗಳಲ್ಲಿ ಪರೇಡ್ ನಡೆಸಲಾಗುತ್ತಿದೆ.
ಶನಿವಾರ ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣೆ ವತಿಯಿಂದ ಉಪ್ಪಿನ ಬೆಟಗೇರಿ, ಸಿಂಗನಹಳ್ಳಿ ಹಾಗೂ ಗರಗ ಗ್ರಾಮಗಳಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು.
ಸಿಪಿಐಗಳಾದ ಎಸ್.ಸಿ.ಪಾಟೀಲ, ವೈ.ಡಿ.ಅಗಸಿಮನಿ, ಪಿಎಸ್ಐಗಳಾದ ಕಿರಣ ಮೋಹಿತೆ ಹಾಗೂ ವಿ.ಎಸ್.ಮಂಕಣಿ ಸೇರಿದಂತೆ ಅನೇಕರ ಮುಂದಾಳತ್ವದಲ್ಲಿ ಪೊಲೀಸರು ಬ್ಯಾಂಡ್ ಸಮೇತ ಪರೇಡ್ ನಡೆಸಿದರು.
ಹಿಜಾಬ್ ಹಾಗೂ ಕೇಸರಿ ಶಾಲಿನ ಈ ಗದ್ದಲ ಇದೀಗ ದೊಡ್ಡಮಟ್ಟದಲ್ಲಿ ಚರ್ಚೆಗೆ ಈಡಾಗಿದ್ದು, ಹೀಗಾಗಿ ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆ ದೃಷ್ಠಿಯಿಂದ ಈ ರೀತಿ ಪರೇಡ್ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
Kshetra Samachara
12/02/2022 08:30 pm