ಕುಂದಗೋಳ : ಪಟ್ಟಣದಲ್ಲಿ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಜಾರಿಗೆ ತಂದಿರುವ ವಿಕೇಂಡ್ ಕರ್ಫ್ಯೂ'ಗೆ ಕುಂದಗೋಳದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಆದರೆ ! ಸರ್ಕಾರ ವಿನಾಯಿತಿ ನೀಡಿರುವ ದಿನಸಿ, ಬೇಕರಿ ಅಂಗಡಿಗಳನ್ನು ಪೊಲೀಸರು ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದೆ, ನೀವೂ ಅಂಗಡಿ ಮುಂಗಟ್ಟು ಕ್ಲೋಸ್ ಮಾಡಿ ಎಂದಿದ್ದಕ್ಕೆ ದಿನಸಿ ವ್ಯಾಪಾರಸ್ಥರು ಗರಂ ಆಗಿ ಪಬ್ಲಿಕ್ ನೆಕ್ಸ್ಟ್'ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಗ್ರಾಹಕರ ಕೊರತೆ ಎದುರಿಸುತ್ತಿದ್ದು, ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಜನ ಕಂಡು ಬಂದರೇ, ಮಾರ್ಕೇಟ್ ರಸ್ತೆ ದಿನಸಿ ವ್ಯಾಪಾರಸ್ಥರು ಬೇಕರಿ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಅಂಗಡಿ ತೆಗೆಯಿರಿ ಎಂದ್ರೇ, ಪೊಲೀಸರು ಕ್ಲೋಸ್ ಮಾಡಿ ಎನ್ನುತ್ತಿದ್ದಾರೆ ನಮಗೊಂದು ಸರಿಯಾದ ಮಾರ್ಗಸೂಚಿ ಕೊಡಿ ಎನ್ನುತ್ತಿದ್ದಾರೆ.
Kshetra Samachara
08/01/2022 12:19 pm