ಕುಂದಗೋಳ : ಕಾನೂನು ನೆರವನ್ನು ಪ್ರತಿಯೊಬ್ಬರು ಪಡೆಯಬೇಕೆಂಬ ಸದುದ್ದೇಶದಿಂದ ಕಾನೂನು ನೆರವು ಸಮಿತಿ ಪಟ್ಟಣದಲ್ಲಿ ರಚನೆಯಾಗಿದೆ ಬಡವರು, ಶೋಷಿತರು, ಮಹಿಳೆಯರು, ಹಿಂದುಳಿದ ಎಲ್ಲ ವರ್ಗದವರು ಇದರ ಲಾಭ ಪಡೆಯಬೇಕೆಂದು ಹಿರಿಯ ವಕೀಲರಾದ ಅಶೋಕ್ ಕ್ಯಾರಕಟ್ಟಿ ಹೇಳಿದರು.
ಪಟ್ಟಣದ ಹರಭಟ್ಟ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸರಸ್ವತಿ ಪೂಜೆ ತಾಲೂಕು ಕಾನೂನು ನೆರವು ಸಮಿತಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅವರು ಭಾಗವಹಿಸಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಡವರಿಗೆ ಶೋಷಿತರಿಗೆ ಅನ್ಯಾಯಕ್ಕೆ ತುತ್ತಾದವರಿಗೆ ಕಾನೂನು ದೂರವಾಗಬಾರದು ಅದು ಎಲ್ಲರ ಕೈಗೆ ಸಿಗಬೇಕು ಎಂದರು.
ಲೈಂಗಿಕ ದೌರ್ಜನ್ಯ (ಪೋಕ್ಸೋ ಕಾಯ್ದೆ) ಕುರಿತು ವಕೀಲ ರಮೇಶ್ ತೊಂಡೊರು ಕಾನೂನು ವಿವರಣೆ ನೀಡಿದರು.ಹರಭಟ್ಟ ಸಂಸ್ಥೆ ಅಧ್ಯಕ್ಷ ಟಿ.ಎಸ್.ಗೌಡಪ್ಪನವರ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅತ್ಯಗತ್ಯ ಎಂದರು. ಈ ಸಂದರ್ಭದಲ್ಲಿ ನ್ಯಾಯವಾದಿ ಅಶೋಕ್ ಕ್ಯಾರಕಟ್ಟಿ ವಿಧ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ಹಾಗೂ ಪಠ್ಯದ ಇತರ ಸಾಮಗ್ರಿ ಕೊಡುಗೆ ನೀಡಿದರು. ಹರಭಟ್ಟ ಸಂಸ್ಥೆ ಪದಾಧಿಕಾರಿಗಳು ಶಿಕ್ಷಕರು ಹಾಗೂ ವಕೀಲರು ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Kshetra Samachara
18/02/2021 11:39 am