ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಪಘಾತ ತಡೆಗೆ ಟ್ರ್ಯಾಕ್ಟರ್ ಗಳಿಗೆ ರಿಪ್ಲೇಕ್ಟರ್ ಹಾಕಿದ ಪೊಲೀಸ್

ಕುಂದಗೋಳ : ಹೆಚ್ಚುತ್ತಿರುವ ಅಪಘಾತಗಳ ಪ್ರಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ರೈತಾಪಿ ವರ್ಗದ ಹಿತದೃಷ್ಟಿಯಿಂದ ಮತ್ತೊಂದು ಸಾಮಾಜಿಕ ಕೆಲಸ ಮಾಡಿ ಸಾರ್ವಜನಿಕರು ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ರೈತಾಪಿ ವರ್ಗದ ಟ್ರ್ಯಾಕ್ಟರ್, ಚಕ್ಕಡಿಗಳಿಗೆ ಸ್ವತಃ ಸಿಪಿಐ ಬಸವರಾಜ ಕಲ್ಲಮ್ಮನವರ ನೇತೃತ್ವದಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಟ್ರ್ಯಾಕ್ಟರ್ ಟೇಲರಗಳಿಗೆ ರೆಡಿಯಂ (ರಿಪ್ಲೇಕ್ಟರ್) ಅಳವಡಿಸುವ ಕಾರ್ಯ ಕೈಗೊಂಡಿದ್ದು, ಇಡೀ ತಾಲೂಕಿನ ರೈತಾಪಿ ಜನರ ಟ್ರ್ಯಾಕ್ಟರ್ ತಡೆದು ರೆಡಿಯಂ ಅಳವಡಿಸುವ ಕಾರ್ಯಕ್ಕೆ ಅಣಿಯಾಗಿದ್ದಾರೆ.

ಕುಂದಗೋಳ ತಾಲೂಕು ಸೇರಿದಂತೆ ಹುಬ್ಬಳ್ಳಿ ಲಕ್ಷ್ಮೇಶ್ವರ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಟ್ರ್ಯಾಕ್ಟರ್ ತಡೆದು ರೈತರಿಗೆ ತಿಳಿ ಹೇಳಿ ರೆಡಿಯಂ ಹಚ್ಚಿ ಅಪಘಾತದ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಲಿದ್ದಾರೆ.

Edited By : Manjunath H D
Kshetra Samachara

Kshetra Samachara

28/01/2021 06:42 pm

Cinque Terre

63.01 K

Cinque Terre

12

ಸಂಬಂಧಿತ ಸುದ್ದಿ