ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಸೇರಿದಂತೆ ಐದು ಜನ ಇಂದು ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದರು.
ಈ ಮೊದಲು ಪೊಲೀಸರು ನಡೆಸಿದ್ದ ಕೊಲೆ ತನಿಖೆಗೆ ಸಂಬಂಧಿಸಿದಂತೆ ಬಸವರಾಜ ಮುತ್ತಗಿ ಖುದ್ದು ನ್ಯಾಯಾಲಯಕ್ಕೆ ಹಾಜರಾದರು.
ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಮುತ್ತಗಿ, ಸಿಬಿಐ ತನಿಖೆ ವೇಳೆ, ಈ ಹಿಂದಿನ ತನಿಖಾಧಿಕಾರಿ ಚನ್ನಕೇಶವ ಟಿಂಗರಿಕರ ಅವರು ನನ್ನ ಕಾಲಿಗೆ ಬಿದ್ದಿದ್ದರು ಎಂಬ ವಿಚಾರ ಸುಳ್ಳು. ಅದೆಲ್ಲವೂ ಸತ್ಯಕ್ಕೆ ದೂರವಾದದ್ದು. ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಕಾಲಿಗೆ ಪೊಲೀಸ್ ಅಧಿಕಾರಿ ಬೀಳುತ್ತಾರೆ ಎಂದರೆ ಅದು ನಂಬಲು ಅಸಾಧ್ಯ. ನಮ್ಮ ಪೊಲೀಸ್ ವ್ಯವಸ್ಥೆ ಅಷ್ಟೊಂದು ಹದಗೆಟ್ಟಿಲ್ಲ. ನಮ್ಮ ತಂದೆ ಸಹ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವರು. ಆ ಇಲಾಖೆ ಉಪ್ಪು ತಿಂದು ನಾನು ಬೆಳೆದಿದ್ದೇನೆ. ಟಿಂಗರಿಕರ್ ಗೆ ಅಷ್ಟೊಂದು ದುಡ್ಡು ಕೊಡುವ ಅವಶ್ಯಕತೆ ಇಲ್ಲ. ಅವರು ನನ್ನ ಕಾಲಿಗೂ ಬಿದ್ದಿಲ್ಲ ಎಂದರು.
Kshetra Samachara
12/01/2021 03:59 pm