ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಘ್ನನಿವಾರಕನ ಪ್ರತಿಷ್ಠಾಪನೆಗೆ ಪರವಾನಗಿ "ವಿಘ್ನ!"; ನೆರವಿಗೆ ಮುತಾಲಿಕ್‌ ಗೆ ಮೊರೆ

ಧಾರವಾಡ: ಶ್ರೀ ಗಣೇಶೋತ್ಸವ ಇನ್ನು ಕೆಲವೇ ದಿನಗಳಲ್ಲಿ ಆಗಮಿಸಲಿದೆ. ಆದರೆ, ಆಚರಣೆಗೆ ಸರ್ಕಾರ ಹಲವು ಷರತ್ತು ವಿಧಿಸಿದೆ‌! ಹೀಗಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಾಡುವವರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಈ ಕಿರಿಕಿರಿಯನ್ನು ತಪ್ಪಿಸಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯವರು ಹಿಂದೂ ಹೋರಾಟಗಾರ ಪ್ರಮೋದ್ ಮುತಾಲಿಕ್ ಅವರ ಮೊರೆ ಹೋಗಿದ್ದಾರೆ.

ಆಗಸ್ಟ್ 31ರಂದು ಎಲ್ಲರ ಮನೆಗಳಿಗೆ ಹಾಗೂ ಗಲ್ಲಿಗಲ್ಲಿಗಳಲ್ಲಿ ಶ್ರೀ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಈಗಾಗಲೇ ಗಣೇಶನ ಮೂರ್ತಿ ತಯಾರಕರು ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಅವುಗಳಿಗೆ ಬಣ್ಣ ಹಚ್ಚುವ ಕಾರ್ಯದಲ್ಲಿದ್ದಾರೆ. ಆದರೆ, ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಹಲವು ಪರವಾನಗಿ ಪಡೆದುಕೊಳ್ಳಬೇಕು ಎಂಬ ನಿರ್ಬಂಧ ಹೇರಿದೆ. ಇದು ಗಣೇಶೋತ್ಸವ ಮಂಡಳಿಯವರಿಗೆ ಕಿರಿಕಿರಿಯನ್ನುಂಟು ಮಾಡಿದೆ.

ಶ್ರೀಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮಂಡಳಿಯವರು ಪಾಲಿಕೆ ಪರವಾನಗಿ, ಹೆಸ್ಕಾಂ ಪರವಾನಗಿ, ಪೆಂಡಾಲ್ ಪರವಾನಗಿ, ಅಗ್ನಿಶಾಮಕ ದಳ ಪರವಾನಗಿ ಸೇರಿದಂತೆ ಇನ್ನೂ ಅನೇಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಸರ್ಕಾರ ಹೇಳುತ್ತಿದ್ದು, ಇದಕ್ಕಾಗಿ ಶ್ರೀ ಗಣೇಶ ಮಹಾಮಂಡಳಿಯವರು ಅಲೆದಾಡುವಂತಾಗಿದೆ. ಸರ್ಕಾರದ ಈ ನಿಯಮವನ್ನು ಪ್ರಮೋದ್ ಮುತಾಲಿಕ್ ವಿರೋಧಿಸಿದ್ದಾರೆ.

ಒಟ್ಟಿನಲ್ಲಿ ಮುತಾಲಿಕ್ ಅವರು ಶ್ರೀ ಗಣೇಶೋತ್ಸವದ ಹಿನ್ನೆಲೆಯಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಸಾರ್ವಜನಿಕ ಗಣಪತಿ ಹಬ್ಬಕ್ಕೆ ಕಿರಿಕಿರಿ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದು, ಸರ್ಕಾರ ಇದನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2022 09:20 pm

Cinque Terre

105.97 K

Cinque Terre

11

ಸಂಬಂಧಿತ ಸುದ್ದಿ