ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೋಕಾಯುಕ್ತ ಎಸ್‌ಪಿ ಬಿಸ್ನಳ್ಳಿ ನಿವೃತ್ತಿ: ಹುಬ್ಬಳ್ಳಿ ಜನತೆಯಿಂದ ಅಭಿನಂದನೆ

ಹುಬ್ಬಳ್ಳಿ: ಸೇವೆಯುದ್ದಕ್ಕೂ ಜನಪರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕ ಲೋಕಾಯುಕ್ತ ಧಾರವಾಡ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಬಿಸ್ನಳ್ಳಿ ಅವರು, ತಮ್ಮ 32 ವರ್ಷಗಳ ಖಾಕಿ ಸೇವೆಯಿಂದ ಇಂದು ನಿವೃತ್ತಿಗೊಳ್ಳಲಿದ್ದಾರೆ.

ಗದಗ ಮೂಲದವರಾದ ಬಿಸ್ನಳ್ಳಿ 1992 ರಲ್ಲಿ ಪಿಎಸ್‌ಐ ಆಗಿ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಸೇವೆ ಆರಂಭಿಸಿ , ಲೋಕಾಯುಕ್ತ ಎಸ್‌ಪಿ ಹಂತಕ್ಕೇರಿ ನಿವೃತ್ತಿಯವರೆಗೂ ಎಲ್ಲೂ ತಮ್ಮ ಸಮವಸ್ತ್ರಕ್ಕೆ ಕಪ್ಪು ಚುಕ್ಕೆ ಅಂಟಿಸಿಕೊಂಡ ವರಲ್ಲ ಅವಳಿನಗರದ ವಿವಿಧ ಠಾಣೆಗಳಲ್ಲಿ , ಗ್ರಾಮೀಣ , ಕಲಘಟಗಿ , ಶಿಗ್ಗಾಂವಿ ಗಜೇಂದ್ರಗಡ ಸೇರಿದಂತೆ ಹಲವೆಡೆ ಬಿಸ್ನಳ್ಳಿಯವರು ಸೇವೆ ಸಲ್ಲಿಸಿದ್ದು, ತಮ್ಮ ಪ್ರಾಮಾಣಿಕ ಸೇವೆಯ ಮೂಲಕವೇ ಜನಮನದಲ್ಲಿದ್ದಾರೆ. ಅಲ್ಲದೇ ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಜನಪರ ಕಾರ್ಯ ಮೆಚ್ವಿ ಹುಬ್ಬಳ್ಳಿ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

30/06/2022 08:26 pm

Cinque Terre

20.82 K

Cinque Terre

2

ಸಂಬಂಧಿತ ಸುದ್ದಿ