ಹುಬ್ಬಳ್ಳಿ: ಒಂದೆಡೆ ಆಸ್ಪತ್ರೆಯ ಮುಂದೆ ತನ್ನ ಅಣ್ಣನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಕಣ್ಣೀರು ಹಾಕುತ್ತಿರೋ ತಮ್ಮಂದಿರು, ಇನ್ನೊಂದು ಕಡೆ ದುಃಖದಲ್ಲಿರುವ ತಮ್ಮಂದಿರನ್ನು ಸಮಾಧಾನ ಪಡಿಸುತ್ತಿರುವ ಸಂಬಂಧಿಕರು, ಈ ದೃಶ್ಯಗಳನ್ನು ನೋಡುತ್ತಾ ಮಮ್ಮಲ ಮರುಗುತ್ತಿರೋ ಸಾರ್ವಜನಿಕರು ಅಷ್ಟಕ್ಕೂ ಇದೆಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಷ್ಟಕ್ಕೂ ಇದೇನು ಕರುಣಾಜನಕ ಕಥೆ ಅಂತೀರಾ ಹಾಗಾದ್ರೆ ಈ ಸ್ಟೋರಿಯನ್ನು ನೋಡಿ...
ಹೀಗೆ ನನ್ನ ಅಣ್ಣನ ಸಾವಿಗೆ ಕಿಮ್ಸ್ ವೈದ್ಯರೇ ಕಾರಣ ಎಂದು ಮಾಧ್ಯಮದ ಮುಂದೆ ತನ್ನ ದುಃಖ ಹೇಳಿಕೊಳ್ಳುತ್ತಿರೋ ಧಾರವಾಡ ಮೂಲದ ಶಾನ್ ನವಾಜ್, ಇಂದು ಬೆಳಿಗ್ಗೆ ಈತನ ಅಣ್ಣನಾದ ಮೆಹಬೂಬ್ ಅಲಿ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ ಕೂಡಲೇ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆದರೆ ಕಿಮ್ಸ್ ನಲ್ಲಿ ವೈದ್ಯರು ಮೆಹಬೂಬ್ ಅಲಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದ ಕಾರಣ ಆಂಬ್ಯುಲೆನ್ಸ್ ನಲ್ಲಿಯೇ ಅರ್ಧಗಂಟೆಗಳ ಕಾಲ
ಸಾವು-ಬದುಕಿನ ನಡುವೆ ಹೋರಾಟ ಮಾಡಿದ್ದಾನೆ, ಆಗ ಮೆಹಬೂಬ್ ಅಲಿಯ ತಮ್ಮಂದಿರು ಕಿಮ್ಸ್ ನಲ್ಲಿನ ವೈದ್ಯರಿಗೆ ಚಿಕಿತ್ಸೆ ಕೊಡುವಂತೆ
ಪರಿಪರಿಯಾಗಿ ಬೇಡಿದ ತದನಂತರದಲ್ಲಿ ವೈದ್ಯರು ಚಿಕಿತ್ಸೆ ಕೊಡಲು ಮುಂದಾದಾಗ ಮೆಹಬೂಬ್ ಅಲಿಯ ಹೃದಯ ಬಡಿತ ನಿಂತು ಹೋಗಿತ್ತು.
ಒಟ್ಟಿನಲ್ಲಿ ಜೀವ ಉಳಿಸಬೇಕಾದ ವೈದ್ಯರ ನಿರ್ಲಕ್ಷ್ಯದಿಂದ ನನ್ನ ಅಣ್ಣನ ಉಸಿರು ನಿಂತಿದೆ, ಇದಕ್ಕೆ ನೇರ ಹೊಣೆ ಆಸ್ಪತ್ರೆಯ ವೈದ್ಯರು ಎಂದು ಕುಟುಂಬಸ್ಥರು ನೇರವಾಗಿ ಆರೋಪವನ್ನು ಮಾಡುತ್ತಿದ್ದು, ಕಿಮ್ಸ್ ಆಡಳಿತ ಮಂಡಳಿ ಇನ್ನಾದರೂ ಎಚ್ಚೆತ್ತುಕೊಂಡು ಮತ್ತೆ ಈ ರೀತಿಯಾದ ತಪ್ಪು ನಡೆಯದಂತೆ ನೋಡಿಕೊಳ್ಳುತ್ತಾರೋ ಅಥವಾ ಯಥಾ ಸ್ಥಿತಿಯನ್ನೇ ಮುಂದುವರೆಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ವಿನಯರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
23/09/2022 05:23 pm