ಹುಬ್ಬಳ್ಳಿ: ನಮಗೆಲ್ಲ ಬೇಂದ್ರೆ ಎಂಬ ಹೆಸರು ಕೇಳಿದ್ರೆ ಸಾಕು ತಟ್ಟನೆ ನೆನಪಾಗೋದು ನಮ್ಮ ಧಾರವಾಡದ ಹೆಮ್ಮೆಯ ವರಕವಿ ದರಾಬೇಂದ್ರೆ, ಅದೇ ರೀತಿಯಾಗಿ ಹು-ಧಾ ಅವಳಿ ನಗರದಲ್ಲಿ ಇವರ ಹೆಸರು ಇಟ್ಟುಕೊಂಡ ಖಾಸಗಿ ಸಾರಿಗೆ ಸಂಸ್ಥೆಯೊಂದು, ಸಂಚಾರಿ ನಿಯಮಗಳನ್ನು ಗಾಳಿಗೆ ತೂರುವುದರ ಜೊತೆಗೆ ಸಾರ್ವಜನಿಕರ ಜೀವದ ಜೊತೆ ಆಟ ಅಡುತ್ತಿದೆ, ಅಷ್ಟಕ್ಕೂ ಇದೇನು ಖಾಸಗಿ ಬಸ್ ದರ್ಬಾರ್ ಅಂತೀರಾ ಈ ಸ್ಟೋರಿಯನ್ನು ಒಮ್ಮೆ ನೋಡಿ.
ಹೌದು.. ಹೀಗೆ ಸಿಗ್ನಲ್ ಇದ್ದರು ಕೂಡಾ ಕ್ಯಾರೆ ಎನ್ನದೇ ಸಿಗ್ನಲ್ ಜಂಪ್ ಮಾಡಿಕೊಂಡು ಹೋಗುತ್ತಿರೋ ಈ ಖಾಸಗಿ ಬಸ್ ಗಳನ್ನು ಅವಳಿ ನಗರದ ಜನತೆ ಬೇಂದ್ರೆ ಬಸ್ ಅಂತಾ ಕರೆಯುತ್ತಿದ್ದಾರೆ, ಕಳೆದ ಕೆಲವು ವರ್ಷಗಳಿಂದ ಅವಳಿ ನಗರದಲ್ಲಿ ಓಡಾಡುತ್ತಿರೋ ಈ ಬೇಂದ್ರೆ ಬಸ್ ಗಳು ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಜೊತೆಗೆ ಅತಿವೇಗವಾಗಿ ಬಸ್ ಚಾಲನೆ ಮಾಡುವುದರ ಮೂಲಕ ಅಪಘಾತಗಳು ಕೂಡಾ ಜಾಸ್ತಿ ಆಗುತ್ತಿದೆ ಎಂದು ಸಾರ್ವಜನಿಕರು ನಿಮ್ಮ ಪಬ್ಲಿಕ್ ನೆಕ್ಸ್ಟ್ ವಾಹಿನಿಗೆ ಮಾಹಿತಿಯನ್ನು ನೀಡಿದ್ದರು.
ಕೂಡಲೇ ಪಬ್ಲಿಕ್ ನೆಕ್ಸ್ಟ್ ಫೀಲ್ಡ್ ಗೆ ಇಳಿದು ರಿಯಾಲಿಟಿ ಚೆಕ್ ಮಾಡಲು ಹುಬ್ಬಳ್ಳಿಯ ಚಿಟಗುಪ್ಪಿ ಸರ್ಕಲ್ ಬಳಿಯಲ್ಲಿ ನಿಂತಾಗ ಬೇಂದ್ರೆ ಸಾರಿಗೆ ಬಸ್ ಗಳು ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂಬುದನ್ನು ವಿಡಿಯೋ ಸಮೇತ ಪಬ್ಲಿಕ್ ನೆಕ್ಸ್ಟ್ ಸೆರೆಹಿಡಿದಿದೆ, ಅಷ್ಟೇ ಅಲ್ಲದೆ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಸ್ ಪಾರ್ಕಿಂಗ್ ಮಾಡಿ ಬೇರೆ ವಾಹನಗಳ ಓಡಾಟಕ್ಕೆ ತೊಂದರೆ ಕೂಡಾ ಈ ಬೇಂದ್ರೆ ಬಸ್ ಗಳಿಂದ ಉಂಟಾಗುತ್ತಿರುವ ದ್ರಶ್ಯಗಳು ಕೂಡಾ ಕಂಡು ಬಂದಿದೆ.
ಒಟ್ಟಿನಲ್ಲಿ ನಮ್ಮ ಹೆಮ್ಮೆಯ ವರಕವಿ ಬೇಂದ್ರೆಯವರ ಹೆಸರನ್ನು ಇಟ್ಟುಕೊಂಡು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಜೀವದ ಜೊತೆ ಆಟವನ್ನು ಆಡುತ್ತಿರೋ ಈ ಖಾಸಗಿ ಸಂಸ್ಥೆಯ ಬಸ್ ಗಳ ಮೇಲೆ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
13/09/2022 07:19 pm