ಕುಂದಗೋಳ ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಷ್ಟ್ 13 ರಿಂದ 15ರ ಸೂರ್ಯಾಸ್ತದವರೆಗೆ ಧ್ವಜಗಳನ್ನು ಹಾರಿಸಲಾಗಿದ್ದು ಸದ್ಯ ಆ ಧ್ವಜಗಳನ್ನು ಕೆಳಗೆ ಇಳಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ ಪಬ್ಲಿಕ್ ನೆಕ್ಸ್ಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.
ಹೌದು ! ಸ್ವಾತಂತ್ರ್ಯ ದಿನಾಚರಣೆ ಮುಗಿದು ಮೂರು ದಿನ ಕಳೆದರೂ ಕೆಲವೊಂದು ಮನೆಗಳ ಮೇಲೆ ಇಂದಿಗೂ ಧ್ವಜಗಳು ಹಾರಾಟ ನಡೆಸಿದ್ದು ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ ಇರುವ ಕಾರಣ ಧ್ವಜಗಳನ್ನು ಕೆಳಗಿಳಿಸಿ ಸಂರಕ್ಷಣೆ ಮಾಡುವಂತೆ ಅವರು ತಿಳಿಸಿದ್ದಾರೆ.
ಅದಲ್ಲದೆ ಈಗಾಗಲೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹ ಮನೆ ಮನೆಗೆ ಹೋಗಿ ಧ್ವಜ ಪಡೆಯುತ್ತಿದ್ದು, ಜನರು ಅವರಿಗೆ ಧ್ವಜ ನೀಡಬಹುದು ಇಲ್ಲವೆ ಅವರೇ ಮನೆಯಲ್ಲಿ ರಕ್ಷಣೆ ಮಾಡಿಟ್ಟುಕೊಳ್ಳಬಹುದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/08/2022 06:45 pm