ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯಡವಟ್ಟು ಮಾಡುತ್ತಲೇ ಇದೆ. ಧ್ವಜದ ಬಗ್ಗೆ ಗೌರವವೇ ಗೊತ್ತಿಲ್ಲದ ಅಧಿಕಾರಿಗಳಿಂದ ರಾಷ್ಟ್ರೀಯ ಧ್ವಜಕ್ಕೆ ಅವಮಾನವಾಗುತ್ತಿದೆ.
ಹೌದು, ರಾಷ್ಟ್ರೀಯ ಧ್ವಜಕ್ಕೆ ತನ್ನದೇ ಆದ ಗೌರವವಿದೆ. ಅಲ್ಲದೇ ಅದನ್ನು ನಿರ್ವಹಣೆ ಮಾಡುವುದು ಕೂಡ ಅಷ್ಟೇ ಜವಾಬ್ದಾರಿಯುತ ಕಾರ್ಯವಾಗಿದೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ಇಲ್ಲಿನ ಅಧಿಕಾರಿಗಳಿಗೆ ರಾಷ್ಟ್ರೀಯ ಧ್ವಜದ ಮಹತ್ವವೇ ಗೊತ್ತಿಲ್ಲದಂತಾಗಿದೆ. ಅಕ್ಷಯಪಾರ್ಕ್ ನಲ್ಲಿರುವ ವಲಯ ಕಚೇರಿ 07ರಲ್ಲಿ ರಾಷ್ಟ್ರೀಯ ಧ್ವಜಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಾರ್ವಜನಿಕರು ಈ ದೃಶ್ಯಗಳನ್ನು ಸೆರೆಹಿಡಿದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ನೀಡಿದ್ದು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಧಿಕ್ಕಾರ ಹಾಕಿದ್ದಾರೆ.
ಇನ್ನೂ ಅಮೃತ ಮಹೋತ್ಸವವನ್ನು ಆಚರಿಸುವ ಮುನ್ನವೇ ಇಂತಹ ಯಡವಟ್ಟು ಮಾಡುತ್ತಿರುವ ಮಹಾನಗರ ಪಾಲಿಕೆ ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದೆಯೋ ಅರ್ಥವಾಗುತ್ತಿಲ್ಲ. ದೇಶಕ್ಕೆ ಹಾಗೂ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ವಲಯ ಕಚೇರಿಯ ನಿರ್ಲಕ್ಷ್ಯ ಧೋರಣೆಯಿಂದ ಜನರು ಆಕ್ರೋಶಗೊಳ್ಳುವಂತಾಗಿದ್ದು, ಇನ್ನಾದರೂ ರಾಷ್ಟ್ರೀಯ ಧ್ವಜದ ಬಗ್ಗೆ ಕಾಳಜಿ ವಹಿಸಿ ದೇಶಪ್ರೇಮ ಉಳಿಸುವ ಕಾರ್ಯವನ್ನು ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 07:38 pm