ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕವಿವಿಗೆ ನೂತನ ಕುಲಪತಿಗಳು ಬಂದಾರ ಯಾರ್ ನೀವು ನೋಡ್ರಿ

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ. ಕೆ. ಬಿ. ಗುಡಸಿ, ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದು, ಅವರು ಇಂದು ಪ್ರಭಾರಿ ಕುಲಪತಿಯವರಾದ ಪ್ರೊ. ವಿಶ್ವನಾಥ ಎಂ. ಅವರಿಂದ ಅಧಿಕಾರವನ್ನು ಸ್ವೀಕರಿಸಿದರು.

ಪ್ರೊ. ಕೆ. ಬಿ. ಗುಡಸಿ, ಅವರು ಕರ್ನಾಟಕ‌ ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ, ಸದರಿಯವರು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಕುಲಪತಿಗಳಾಗಿ ಪ್ರೊ. ಕೆ. ಬಿ. ಗುಡಸಿ ಅಧಿಕಾರ ಸ್ವೀಕರಿಸುವ ಮೊದಲು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜವಾನ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ ಸಿಂಧೆ, ಗೌರವ ಅಧ್ಯಕ್ಷ ಮಂಜುನಾಥ ಹೊಂಗಲದ, ಸಿಂಡಿಕೇಟ್ ಸದ್ಯಸರಾದ ರವಿ ಮಳಗೇರಿ,ಡಾ.ಕಿರಣ ಹೊಂಬಾಳ, ರಜತ್ ನಗರ,ಸೇರಿದಂತೆ ಆಡಳಿತದ ಮಂಡಳಿಯ ಸದ್ಯಸರುಗಳು ಇದ್ದರು.

ಈ ವೇಳೆ ಕುಲಸಚಿವರಾದ ಡಾ. ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನದ ಕುಲಸಚಿವರಾದ ಪ್ರೊ. ರವೀಂದ್ರನಾಥ ಎನ್. ಕದಂ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.

Edited By :
Kshetra Samachara

Kshetra Samachara

26/09/2020 08:15 pm

Cinque Terre

19.46 K

Cinque Terre

2

ಸಂಬಂಧಿತ ಸುದ್ದಿ