ಕುಂದಗೋಳ: ತಾಲೂಕಿನ ರೊಟ್ಟಿಗವಾಡ ಗ್ರಾಮದಿಂದ ಕುವರಿಯರಾದ ಯಶೋಧಾ ಮುತ್ತಣ್ಣ ಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಬಿಎಸ್‌ಎಫ್ ಸೈನಿಕರ ತರಬೇತಿ ಮುಗಿಸಿ ಸ್ವ-ಗ್ರಾಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ.
ಒಂದು ವರ್ಷದ ಬಿಎಸ್‌ಎಫ್ ಸೈನಿಕರು ತರಬೇತಿಯನ್ನು ಯಶಸ್ವಿಯಾಗಿ ಕೈಗೊಂಡು ರೊಟ್ಟಿಗವಾಡಕ್ಕೆ ಮರಳಿದ ಇಬ್ಬರು ಕುವರಿಯರಿಗೆ ಗ್ರಾಮಸ್ಥರು ಹೂ ಮಳೆ ಸುರಿದು ಸ್ವಾಗತ ಕೋರಿ ಸನ್ಮಾನ ಮಾಡಿದರು.
ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಎಫ್ ಯೋಧರಾದ ಕುಮಾರಿ ಯಶೋಧಾ ಮುತ್ತಣ್ಣ ಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಅವರು ಮಹಿಳೆ ಕೇವಲ ಸೌಟು ಹಿಡಿದು ಮನೆ ನಿಭಾಯಿಸಲು ಮಾತ್ರವಲ್ಲ ಬಂದೂಕು ಹಿಡಿದು ದೇಶ ಕಾಯಲು ಸಿದ್ಧ ಎಂಬ ಮಾತು ಮಹಿಳೆಯರ ಸಾಧನೆಗೆ ಬೆಲೆ ತಂದಿತು.
ರೊಟ್ಟಿಗವಾಡ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಯೋಧರಿಗೆ ವಿಶೇಷ ಸತ್ಕಾರ ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಈ ವೇಳೆ ಯೋಧರನ್ನು ಚಕ್ಕಡಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆ ತರಲಾಯಿತು.
Kshetra Samachara
08/05/2022 10:01 am