ಧಾರವಾಡ : ಪ್ರಕರಣವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ನಡುವೆ ನ.26-ಗುರುವಾರ ರಾತ್ರಿ ನಡೆದ ವಾಗ್ವಾದದ ಗಲಾಟೆ ರಾಜಿ ಸಂಧಾನ ಮೂಲಕ ಕೊನೆಗೂ ಯಶಸ್ವಿಗೊಂಡಿದೆ.
ನಗರದ ಎಪಿಎಂಸಿ ನವನಗರ ಠಾಣೆ ಪ್ರಭು ಸುರೇನ್ ಮತ್ತು ವಕೀಲರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಕೀಲರ ಸಂಘದಲ್ಲಿ ಸತತ ಹಲವು ಗಂಟೆಗಳ ಕಾಲ ನಡೆದ ರಾಜಿ ಸಂಧಾನ ಸಭೆಯಲ್ಲಿ ನವನಗರ ಠಾಣೆ ಸಿಪಿಐ ಪ್ರಭು ಸುರೇನ್ ಕ್ಷಮೆ ಕೇಳಿದ್ದು, ಇದೊಂದು ಉದ್ದೇಶ ಪೂರ್ವಕವಾದ ಘಟನೆಯಲ್ಲ,ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆಂದು ಕ್ಷಮೆ ಕೇಳಿದರು.
ಡಿಸಿಪಿ ಬಸರಗಿ ಮತ್ತು ವಕೀಲರ ಸಂಘದ ಅಧ್ಯಕ್ಷರ ಮುಂದಾಳತ್ವದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು,ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ವಕೀಲರ ಸಂಘ ನಿರ್ಧರಿಸಿದ್ದರು.ರಾಜಿ ಸಂಧಾನದ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನ.26 ರಂದು ಘಟನೆ : ನವನಗರದ ಕರ್ನಾಟಕ ಸರ್ಕಲ್‌ನಲ್ಲಿ ವಕೀಲ ವಿನೋದ್ ಪಾಟೀಲ್, ಪ್ರವೀಣ ಪೂಜಾರಿ ಹಾಗೂ ಮಲ್ಲಯ್ಯ ಹಿರೇಮಠ ನಡುವೆ ಜಗಳ ನಡೆದಿತ್ತು. ಈ ವಿಷಯ ಗೊತ್ತಾಗಿ ಎಪಿಎಂಸಿ ಠಾಣೆಯ ಇನ್ಸಫೆಕ್ಟರ್ ಪ್ರಭು ಸೂರಿನ್ ಮತ್ತು ಇತರೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರು ಮತ್ತು ವಕೀಲ ವಿನೋದ್ ನಡುವೆ ಚಕಮಕಿ ನಡೆದಿತ್ತು.
Kshetra Samachara
06/12/2020 07:39 pm