ಧಾರವಾಡ: ನವನಗರದ ನಿವಾಸಿಯಾಗಿರುವ ವಕೀಲರ ಸಂಘದ ಸದಸ್ಯ ವಿನೋದ ಪಾಟೀಲ ಅವರ ಮೇಲೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿರುವ ಎಪಿಎಂಸಿ ಠಾಣೆಯ ಇನ್ ಸ್ಪೆಕ್ಟರ್ ಪ್ರಭು ಸೂರಿನ ಅವರನ್ನು ನಾಳೆಯವರೆಗೂ ಅಮಾನತ್ತು ಮಾಡಬೇಕೆಂದು ಧಾರವಾಡ ಬಾರ್ ಅಸೋಸಿಯೇಷನ್ ಠರಾವು ಮಾಡಿಕೊಂಡಿದೆ.
ಇಂದು ಸಭೆಯಲ್ಲಿ ನಡೆದ ಚರ್ಚೆಗಳ ಮೇಲೆ ಠರಾವು ಹೊರಡಿಸಿರುವ ಸಂಘದ ಅಧ್ಯಕ್ಷ ಬಿ.ಎಸ್.ಗೋಡಸೆ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಆರ್.ಮಟ್ಟಿ, ನಾಳೆ ಕ್ರಮ ಜರುಗಿಸದೇ ಇದ್ದರೇ ಮುಂದಿನ ಹೋರಾಟದ ರೂಪುರೇಷೆ ರಚಿಸಲು ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಠರಾವಿನಲ್ಲಿ ನಮೂದು ಮಾಡಲಾಗಿದೆ.
ಸಭೆಯಲ್ಲಿ ಎರಡು ಪ್ರಮುಖ ಠರಾವುಗಳನ್ನು ತೆಗೆದುಕೊಳ್ಳಲಾಗಿದ್ದು, ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿ ಅವರ ಮೇಲೆ ಹಲ್ಲೆ ಮಾಡಿದ ಹುಬ್ಬಳ್ಳಿಯ ನವನಗರ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಪ್ರಭು ಸೂರಿನ್ ಹಾಗೂ ಇನ್ನುಳಿದ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬೇಕು ಮತ್ತು ಕೂಡಲೇ ಸಿಪಿಐಯನ್ನು ಬಂಧಿಸಬೇಕೆಂದು ನಿರ್ಣಯಿಸಿ ಸರ್ವಾನುಮತದಿಂದ ಠರಾವು ಮಾಡಲಾಗಿದೆ.
Kshetra Samachara
30/11/2020 10:48 pm