ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪಘಾತ ಪ್ರಕರಣದ ಲಾರಿ ಚಾಲಕನಿಗೆ ಜೈಲು ಶಿಕ್ಷೆ: ಘಟನೆ ಯಾವಾಗ ನಡೆದಿದ್ದು ಗೊತ್ತಾ?

ಧಾರವಾಡ: ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹಾಯಿಸಿ ಆತನ ಸಾವಿಗೆ ಕಾರಣವಾಗಿದ್ದ ಲಾರಿ ಚಾಲಕನಿಗೆ ಧಾರವಾಡ ಪ್ರಿನ್ಸಿಪಲ್ ಸಿ.ಜೆ. ಮತ್ತು ಸಿಜೆಎಂ ನ್ಯಾಯಾಲಯ, 1 ವರ್ಷ 6 ತಿಂಗಳು ಶಿಕ್ಷೆ ನೀಡಿ‌ ಆದೇಶ ಹೊರಡಿಸಿದೆ.

2017ರ ಮೇ 19ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಗರದ ನವಲೂರ ಗ್ರಾಮಕ್ಕೆ ಹೋಗಲು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಬ್ರಿಡ್ಜ್‌ ಬಳಿ ನವಲೂರ ಛಾವಣಿ ಟ್ರಕ್ ಚಾಲಕ ಮಂಜುನಾಥ ಭೀಮಪ್ಪ ಹೊನ್ನಪ್ಪನವರ ಎಂಬವರು ಟ್ರಕ್ ಅನ್ನು ಹಿಂದಕ್ಕೆ ತೆಗೆಕೊಳ್ಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಮಣ್ಣು ಸಮಗೊಳಿಸುವ ಕೆಲಸದಲ್ಲಿ ನಿರತನಾಗಿದ್ದ ಸಮಯದಲ್ಲಿ ಮನಸೂರ ಗ್ರಾಮದ ನಾಗಪ್ಪ ನಿಂಗಪ್ಪ ದುರಗಣ್ಣವರ ಅವರು ಅಪಘಾತ ಪಡಿಸಿ ಮರಣ ಪಡಿಸಿದ ಬಗ್ಗೆ ಧಾರವಾಡ ಸಂಚಾರ ಪೊಲೀಸ್ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಎಸ್.ಎಫ್ ತೋಟಗಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿತನ ಮೇಲೆ ನ್ಯಾಯಾಲಯಕ್ಕೆ ಆಪಾದನಾ ಪಟ್ಟಿ ಸಲ್ಲಿಸಿದ್ದರು.

ಈ ಕುರಿತು ಧಾರವಾಡದ ಪ್ರಿನ್ಸಿಪಲ್ಸ್ ಸಿ.ಜೆ,ಮತ್ತು ಸಿ.ಜೆ.ಎಮ್ ನ್ಯಾಯಾಧೀಶರಾದ ಎಸ್.ವಿ. ಶ್ರೀಕಾಂತ ಇವರು ಪ್ರಕರಣ ವಿಚಾರಣೆ ನವೆಂಬರ್ 27 ರಂದು ಆರೋಪಿತನಿಗೆ 1 ವರ್ಷ 6 ತಿಂಗಳು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. 3,250-00 ದಂಡ , ದಂಡ ತುಂಬದೇ ಇದ್ದ ಪಕ್ಷದಲ್ಲಿ 90 ದಿವಸಗಳ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

29/11/2020 10:28 pm

Cinque Terre

72.28 K

Cinque Terre

4

ಸಂಬಂಧಿತ ಸುದ್ದಿ