ಕುಂದಗೋಳ : ಅಬ್ಬಾ ! ಕೊನೆಗೂ ಯುದ್ಧ ಪೀಡಿತ ಉಕ್ರೇನ್ ರಾಷ್ಟ್ರದಿಂದ ಮರಳುತ್ತಿರುವ ವಿದ್ಯಾರ್ಥಿಗಳ ಪೈಕಿ, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಸಂಶಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ಭಾನುವಾರ ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚೈತ್ರಾ ಸಂಶಿಯವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹೂಗುಚ್ಛ ನೀಡಿ ತಾಯ್ನಾಡಿಗೆ ಸ್ವಾಗತಿಸಿ ಪಾಲಕರ ಸಮ್ಮುಖದಲ್ಲಿ ಚೈತ್ರಾಳಿಗೆ ಅಭಿನಂದನೆ ತಿಳಿಸಿದರು.
ಬಳಿಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರ ನೇತೃತ್ವದಲ್ಲಿ ಚೈತ್ರಾ ಸಂಶಿ ಅವರನ್ನು ಮನೆಗೆ ಕರೆತಂದು ಕುಟುಂಬಸ್ಥರು ಪೋಷಕರು ಗ್ರಾಮಸ್ಥರ ಉಪಸ್ಥಿತಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಚೈತ್ರಾ ಸಂಶಿ ಅವರಿಗೆ ಸಿಹಿ ನೀಡಿ ಚೈತ್ರಾ ಸಂಶಿ ಉಕ್ರೇನ್ ದಿನದ ಪರಿಸ್ಥಿತಿಯನ್ನು ತಹಶೀಲ್ದಾರ ವಿಚಾರಿಸಿದರು.
ತಾಯ್ನಾಡಿಗೆ ಮರಳಿದ ಚೈತ್ರಾ ಸಂಶಿಗೆ ಯರಗುಪ್ಪಿ ಗ್ರಾಮ ಪಂಚಾಯಿತಿ ಅಭಿನಂದನಾ ಸಮಾರಂಭ ಏರ್ಪಡಿಸಿ, ಅವರ ಅನುಭವ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದರು.
ಬಳಿಕ ತಹಶೀಲ್ದಾರ ಚೈತ್ರಾ ಸಂಶಿ ಕರೆತರುವಲ್ಲಿ ತಾಲೂಕು ಜಿಲ್ಲಾ ಸರ್ಕಾರದ ಪಾತ್ರವನ್ನು ವಿವರಿಸಿದರು. ಗ್ರಾ.ಪಂ.ಸದಸ್ಯರು ಚೈತ್ರಾ ಸಂಶಿ ಅವರನ್ನ ಸನ್ಮಾನಿಸಿ ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟ ರಾಣೆಬೆನ್ನೂರಿನ ಚಳ್ಳಕೆರೆ ಗ್ರಾಮದ ವಿದ್ಯಾರ್ಥಿ ನವೀನ್ ಗ್ಯಾನಗೌಡ್ರ ನಿಧನಕ್ಕೆ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಿದರು
Kshetra Samachara
07/03/2022 12:41 pm