ಅಳ್ನಾವರ:75 ನೇ ಅಮೃತ ಮಹೋತ್ಸವ ದ ಅಂಗವಾಗಿ ಅಳ್ನಾವರ ಪಟ್ಟಣದ ಬೀದಿ ಬೀದಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿಗಾಗಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು,ಸದಸ್ಯರು,ಅಧಿಕಾರಿಗಳು ಸೇರಿದಂತೆ ವಿವಿಧ ಶಾಲಾ ಮಕ್ಕಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು,ಡ್ರಮ್ ಬಾರಿಸುವುದರ ಮೂಲಕ ವಿಶಿಷ್ಟವಾಗಿ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಪಂ,ಪಂಚಾಯಿತಿಯ ಅಧ್ಯಕ್ಷ ಸುವರ್ಣ ಕಡಕೊಳ,ಉಪಾಧ್ಯಕ್ಷ ನದೀನ್ ಕಾಂಟ್ರಾಕ್ಟರ್,ಸದಸ್ಯರಾದ ತಮೀಮ್ ತೆರಗಾಂವ್,ರಾಜು ಯಲಕಪಾಟಿ,ರಮೇಶ ಕುನ್ನೂರಕರ್,ಪುಂಡಲೀಕ ಪಾರದಿ,ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
13/08/2022 03:54 pm