ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ: ಮಳಿಗೆಗಳಿಗೆ ಭೇಟಿ ನೀಡಿ ದಂಡ ಹಾಕಿದ ದಂಡಪ್ಪನವರ

ಹುಬ್ಬಳ್ಳಿ: ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ, ಹುಬ್ಬಳ್ಳಿನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ, ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

ಹೌದು.. ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಶ್ರೀಧರ್ ದಂಡಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಕೊಪ್ಪಿಕರ್ ರೋಡ್ ಮತ್ತು ಮತ್ತಿತರ ಕಡೆ ದಾಳಿ ಮಾಡಿದ ಸಿಬ್ಬಂದಿ, ಬೇಕರಿ, ಕಿರಾಣಿ ಅಂಗಡಿ, ಬಾರ್ ಮತ್ತಿತರ ಕಡೆ ತಪಾಸಣೆ ನಡೆಸಿದ್ದಾರೆ.

ಇನ್ನೂ ಹತ್ತಾರು ಕೆ.ಜಿ. ಪ್ಲಾಸ್ಟಿಕ್ ಚೀಲ ವಶಕ್ಕೆ ಪಡೆದಿದ್ದು, ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಮುಂದೆ ಪ್ಲಾಸ್ಟಿಕ್ ಬಳಸದೇ ಇರುವಂತೆ ತಾಕೀತು ಮಾಡಿದ್ದಾರೆ.

Edited By :
Kshetra Samachara

Kshetra Samachara

21/07/2022 02:16 pm

Cinque Terre

24.66 K

Cinque Terre

0

ಸಂಬಂಧಿತ ಸುದ್ದಿ