ಹುಬ್ಬಳ್ಳಿ: ನಮ್ ಸರ್ಕಾರಿ ಕಚೇರಿನ್ಯಾಗ್ ಈ ರೀತಿ ವ್ಯವಸ್ಥೆ ಇದ್ರ್... ಇನ್ ನಮ್ ಮಂದಿಗ ಮಾಡಿದ್ದ ವ್ಯವಸ್ಥೆ ಅದೋಗತಿ ಬಿಡ್ರಿ.
ನೋಡ್ರಿ... ನೋಡ್ರಿ.. ಹೊರಗಿಂದ ಎಷ್ಟು ಚಂದ ಕಾಣುತ್ ನಮ್ಮ ಮಿನಿ ವಿಧಾನಸೌಧ. ಆದ್ರ್ ಒಳಗ ಹೋದ್ರ ಗಬ್ಬು ವಾಸನೆ. ಯಾಕ್ ಹೇಳ್ರಿ.? ಶೌಚಾಲಯದಾಗ ಸರಿಯಾಗಿ ಸ್ವಚ್ಛತೆ ಇಲ್ದಕ್ ಈ ರೀತಿ ಮಿನಿ ವಿಧಾನ ಸೌಧ ಗಬ್ಬು ವಾಸನೆ ಹೊಡ್ಯಾಕುಂತೈತಿ. ಅಷ್ಟೇ ಅಲ್ದ್ ಇಲ್ಲಿ ದಿನಕ್ಕೆ ಸಾವಿರಾರು ಸಾರ್ವಜನಿಕರು ಬರ್ತಾರಾ. ಇಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಕಚೇರಿಗಳು ಸಹ ಇವೆ.. ಆದ್ರ್ ಏನ ಮಾಡೋದು ಇಷ್ಟೆಲ್ಲ ಸಮಸ್ಯೆಗಳು ಅವರಿಗೆ ಹೇಗ್ ಗೊತ್ತ ಆಗುತ್ತೇ.?
ಸುಮಾರು ದಿನಗಳಿಂದ ಹೀಗೆ ಇರುವ ಈ ಶೌಚಾಲಯಕ್ಕೆ ಸಾರ್ವಜನಿಕರು ಬರಬೇಕೆಂದ್ರ ಅತೀ ಸಂಕಟದಿಂದ ಬರಬೇಕ ನೋಡ್ರಿ. ಇದಕ್
ನಮ್ ಶಶಿಧರ ಮಾಡ್ಯಾಳ ಸಾಹೆಬ್ರ್ ಗಬ್ಬು ವಾಸನೆ ಹೊಡೆಯುತ್ತಿರುವ ಈ ಶೌಚಾಲಯಕ ನಿರ್ವಹಣೆ ಮಾಡಸ್ಬೇಕ್. ಇಲ್ಲಾ ಅಂದ್ರ ಈ ನಮ್ ಅಧಿಕಾರಿಗಳು ಸಾವಿರಾರು ರೂಪಾಯಿ ಪಗಾರ್ ತಗೋತ್ತಾರಾ ಒಬ್ಬಬ್ಬೊರು ಇಷ್ಟ ಅಂತ ಹಾಕಿ ದಿನಂಪ್ರತಿ ಶೌಚಾಲಯವನ್ನು ಕ್ಲೀನ್ ಮಾಡಸ್ರಲ್ಲ. ನಿಮಗೂ ಒಳ್ಳೆಯದು ಬಂದಂತಹ ಸಾರ್ವಜನಿಕರಿಗೂ ಒಳ್ಳೆದ್ ಆಗುತ್ ಅನ್ನೋದು ಪಬ್ಲಿಕ್ ಆಗ್ರಹ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
23/06/2022 11:27 am