ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾರ್ವಜನಿಕ ಶೌಚಾಲಯ ಐದು ಉಪಯೋಗವಿಲ್ಲದೆ ಹಾಳು!

ಕುಂದಗೋಳ: ಸರ್ಕಾರ ಕೊಡುವ ಯೋಜನೆಗಳು ಕೇವಲ ಕಾಗದ ಪತ್ರ ಮತ್ತು ಬಿಲ್ ತೆಗೆಯಲು ಮಾತ್ರ ಸಿಮೀತ ಆಗಿವೆಯಾ ? ಎಂಬ ಸಂಶಯವನ್ನು ಚಾಕಲಬ್ಬಿ ಗ್ರಾಮದ ಸಾರ್ವಜನಿಕ ಶೌಚಾಲಯ ನೋಡಿದ್ರೆ ಭಾಸವಾಗುತ್ತಿದೆ.

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಗ್ರಾಮ ಪಂಚಾಯಿತಿ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಲಾಗಿರುವ ಐದು ಸುಸಜ್ಜೀತ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ಎಲ್ಲೇಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡಲಾಗಿದ್ದು ನಾಗರೀಕರು ಶೌಚಾಲಯದ ಕಡೆ ತಲೆ ಎತ್ತಿ ನೋಡದಂತಹ ದುಸ್ಥಿತಿ ಇದೆ.

ಇನ್ನೂ ಹಳ್ಳಿಗಳಲ್ಲಿ ಬಯಲು ಶೌಚ ಮುಕ್ತ ಮಾಡಬೇಕೆಂದು ಈ ಸಾರ್ವಜನಿಕ ಶೌಚಾಲಯ ಕಟ್ಟಿಸಿದ್ದರೂ ಪ್ರಯೋಜನ ಯಾಕಿಲ್ಲಾ ? ಅದಲ್ಲದೆ ಈ ಶೌಚಾಲಯ ನಿರ್ವಹಣೆ ಯಾರ ಹೊಣೆ ? ಸ್ಥಳೀಯ ಗ್ರಾಮ ಪಂಚಾಯಿತಿ ಇದಕ್ಕೊಂದು ಬೀಗ ಜಡಿದು ನಲ್ಲಿ ನೀರು ಪೂರೈಸಿ ಅವ್ಯವಸ್ಥೆ ಸರಿಪಡಿಸಬಾರದೇ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಹಣ ಖರ್ಚು ಮಾಡಿ ಕಟ್ಟಿಸಿದ ಶೌಚಾಲಯ ಬಳಸಿ ನೈರ್ಮಲ್ಯ ಕಾಪಾಡಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

16/06/2022 09:47 pm

Cinque Terre

18.21 K

Cinque Terre

0

ಸಂಬಂಧಿತ ಸುದ್ದಿ