ʼಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿʼ
ನವಲಗುಂದ: ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೌಚಾಲಯದ ಸೌಕರ್ಯ ಇಲ್ಲ ಹಾಗೂ ಪ್ರಾಣಕ್ಕಾಗಿ ಕಾದು ಕುಳಿತಿದೆ ನೀರಿನ ಟ್ಯಾಂಕ್ ಎಂದು ಪಬ್ಲಿಕ್ ನೆಕ್ಸ್ಟ್ ಶನಿವಾರ ಸುದ್ದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಶಾಲೆಯಲ್ಲಿ ಬಾಯ್ತೆರೆದಿದ್ದ ನೀರಿನ ಟ್ಯಾಂಕ್ ಗೆ ಮುಚ್ಚಳ ಹಾಕಿಸಿದ್ದಾರೆ.
ಎಸ್... ನಿಮ್ಮ ʼಪಬ್ಲಿಕ್ ನೆಕ್ಸ್ಟ್ʼ ಯಮನೂರ ಗ್ರಾಮದ ಶಾಲೆಯ ದುಸ್ಥಿತಿ ಬಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಸುರೇಶ ಇಟ್ನಾಳ್ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿ, ಕೆಲವೇ ಗಂಟೆಗಳಲ್ಲಿ ನೀರಿನ ಟ್ಯಾಂಕ್ ಗೆ ಮುಚ್ಚಳ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಶಾಲೆಯ ಆವರಣದ ಸ್ವಚ್ಛತೆಗೆ ಮುಂದಾಗಿದ್ದರು. ಅಧಿಕಾರಿಗಳು ಸಹ ಸ್ಪಂದಿಸಿ, ನಿರ್ವಹಣೆ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು, ಶೌಚಾಲಯದ ಸಮಸ್ಯೆ ಮಾತ್ರ ಹಾಗೇ ಉಳಿದಿದೆ. ಈ ಬಗ್ಗೆ ಅಧಿಕಾರಿಗಳು MGNREGA ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಶೌಚಾಲಯದ ನಿರ್ಮಾಣವಾಗಲಿ ಎಂಬುದು ಕೂಡ ಗ್ರಾಮಸ್ಥರ ಒತ್ತಾಸೆಯಾಗಿದೆ.
- ವಿನೋದ ಇಚ್ಚಂಗಿ, ʼಪಬ್ಲಿಕ್ ನೆಕ್ಸ್ಟ್ʼ ನವಲಗುಂದ
Kshetra Samachara
15/05/2022 06:32 pm