ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ರಾಜ್ಯ ಹೆದ್ದಾರಿಯ ನೂಲ್ವಿ ಕ್ರಾಸ್ ತ್ಯಾಜ್ಯ ವಿಲೇವಾರಿ ತಾಣ

ಕುಂದಗೋಳ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಬಳಿಯ ನೂಲ್ವಿ ಕ್ರಾಸ್ ಸಂಪೂರ್ಣ ತ್ಯಾಜ್ಯ ವಿಲೇವಾರಿ ತಾಣವಾಗಿದೆ. ಹೀಗಾಗಿ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ರೋಗದ ಭೀತಿ ಎದುರಾಗಿದೆ.

ಹೌದು ! ನೂಲ್ವಿ ಕ್ರಾಸ್ ಬಯಲಿನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು ಸಾರಾಯಿ ಬಾಟಲ್ ಗ್ಲಾಸ್, ತರಕಾರಿ ತ್ಯಾಜ್ಯ, ಹಣ್ಣು-ಹಂಪಲುಗಳ ತ್ಯಾಜ್ಯ ಸೇರಿ ಮಾಂಸ-ಮೊಟ್ಟೆಯ ತ್ಯಾಜ್ಯ ಎಸೆಯಲಾಗಿದೆ. ಹಾಗೂ ರಸ್ತೆಯ ಇನ್ನೊಂದು ಬದಿ ಕಟ್ಟಡದ ಅವಶೇಷ ತಂದು ಸುರಿಯಲಾಗಿದೆ. ಇದರಿಂದ ದುರ್ವಾಸನೆ ವಿಪರೀತವಾಗಿದ್ದು ನಾಯಿಗಳ ಹಾವಳಿ ಹೆಚ್ಚಾಗಿದೆ.

ಈ ಸ್ಥಳದಲ್ಲಿ ವಾಹನ ಚಲಾಯಿಸುವುದೇ ದುಸ್ತರವಾಗಿದ್ದು, ನೂಲ್ವಿ ಹಾಗೂ ಅದರಗುಂಚಿ ಮಧ್ಯವೇ ಇಂತಹ ಅವ್ಯವಸ್ಥೆ ಏರ್ಪಟ್ಟಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸುದ್ಧಿ ಪ್ರಸಾರ ಮಾಡಿ ಅವ್ಯವಸ್ಥೆಗೆ ಮುಕ್ತಿ ನೀಡುವಂತೆ ಸ್ಥಳೀಯರು ಪಬ್ಲಿಕ್ ನೆಕ್ಸ್ಟ್‌ಗೆ ವಿಡಿಯೋ ಕಳುಹಿಸಿದ್ದಾರೆ.

ಇದು ವೀಕ್ಷಕರ ವರದಿ

Edited By : Nagesh Gaonkar
Kshetra Samachara

Kshetra Samachara

27/04/2022 03:07 pm

Cinque Terre

27.25 K

Cinque Terre

0

ಸಂಬಂಧಿತ ಸುದ್ದಿ