ಹುಬ್ಬಳ್ಳಿ: ನಮಸ್ಕಾರ್ ರೀ ನಮ್ ಹುಬ್ಬಳ್ಳಿ ಮಂದಿಗೆ. ಸ್ಮಾರ್ಟ್ ಸಿಟಿ ಬಗ್ಗೆ ಹೇಳೋದ ಬ್ಯಾಡ ಇವರ್ ಸ್ಮಾರ್ಟ್ ಸಿಟಿ ಮಾಡಾಕತ್ತಾರೋ ಹೊಲಸು ಸಿಟಿ ಮಾಡಾಕತ್ತಾರೋ ಅನ್ನೋದು ಪರಮಪಿತ ಸೃಷ್ಟಿಕರ್ತ ಜಗತ್ ಪಾಲಕ ಶ್ರೀಹರಿ ಬ್ರಹ್ಮನಿಗೆ ಗೊತ್ತು.
ಹೌದ್ರೀ ಮತ್ತ... ನಮ್ ಹುಬ್ಬಳ್ಳಿ ಅಂಚಟಗೇರಿ ಓಣ್ಯಾಗಿನ ರಸ್ತೆ ನೋಡಿದ್ರೆ ಅನಸ್ತೈತಿ ಸ್ವರ್ಗಕ್ಕೆ ಹೋಗೋ ಇರೋ one and only ದಾರಿ ಅಂತ್ ಯಾಕಿಂಗ್ ಅನ್ನಕತ್ತಾರ್ ಅಂತೀರೇನ್ ಇಲ್ಲಿ ನೋಡ್ರಿ... ಬೃಂದಾವನದ ಕಾರಂಜಿ ಹಂಗ ಚಿಮ್ಮಾಕತ್ತಾವ ನೀರಿನ ಪೈಪು, ಮಾನಸ ಸರೋವರದ ಝರಿಯಂಗ ಹರಿಯಾಕುಂತಿರುವ ಇಲ್ಲಿಯ ಡ್ರೈನೇಜ್ ನೀರು, ಕನ್ನಂಬಾಡಿ ಆಣೆಕಟ್ಟಿನಂತೆ ನೀರ ಜಮಾ ಆದಂಗ ಇಲ್ಲಿ ನಳದ ನೀರು, ಡ್ರೈನೇಜ್ ನೀರು, ಚಂಬರ್ ನೀರು, ಗಟರ್ ನೀರು ಎಲ್ಲಾ ಮಿಕ್ಸ್ ಮಸಾಲಾ ಆಗಿ ಹೋಗೋರಿಗೆ ಬರೋರಿಗೆ ಲಚಲ್ ಪಚಲ್ ಅಂತ wel come ಮಾಡಕ್ ಕುಂತೈತಿ.
ಏ...ಪಾಪ್ ಇದ್ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲ. ಅದಕ್ ಹಿಂಗ್ ಐತಿ ಅನಬ್ಯಾಡ್ರೀ. ಇಲ್ಲಿ ಮಂದಿ ಎಲ್ಲಾ ಸೇರಿ ಮನವಿ ಕೊಟ್ಟ ಹೇಳಿದ್ರೂ. NO use...
ಇದರ್ ಬಗ್ಗೆ ಇಲ್ಲಿಯ ಮಂದಿನ ಹೇಳತ್ತಾರ್ ಕೇಳ್ರೀ....
ಈ ಹೋಳಸ್ ವಾಸನಿ ನೋಡಿ ನೋಡಿ.. ಅವರ್ ಮೂಗನ್ಯಾಗಿನ್ ವಾಸನಿ power ಹೋಗೈತ್ತಿ.. ಅಂತಾರ್...
ಇಲ್ಲಿ ಪರಿಸ್ಥಿತಿ ಎಷ್ಟ ಕೆಟ್ಟ ಆಗೈತಿ ಅಂದ್ರ್ ನಮ್ಮ ಮಂದಿ ಜನಪ್ರತಿನಿಧಿಗಳಿಗೆ ಆಯ್ಕೆ ಮಾಡಿ , ತಮ್ಮ tax ರೋಕ್ಕದಿಂದ ಪಗಾರ್ ಕೊಟ್ಟ ಈಗ ಅವರಿಗೆ ಕೈ ಮುಗದ್ ಬೇಡಿಕೊಳ್ಳುವಂಗ್ ಆಗೈತ್ತಿ.. (ಪ್ರಸಾದ ಅಬ್ಬಯ ಅವರ್ ಫೋಟೋ ಬಳಸಿ)
ಅಲ್ಲರೀ ಪ್ರಸಾದ ಅಬ್ಬಯ ಸಾಹೇಬ್ರ್.... ಸ್ವಲ್ಪ ಟೈಮ್ ಮಾಡಿಕೊಂಡ್ ನಿಮ್ಮ ಮತಾ ಹಾಕದೋರ್ problem ಕೇಳ್ರೀ.. ..
-ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
29/03/2022 02:19 pm