ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಟ್ಟಣಕ್ಕೆ ಶೀಘ್ರದಲ್ಲಿ 24/7 ಮಲಪ್ರಭಾ ನೀರು

ಅಣ್ಣಿಗೇರಿ: ಹೆಸರು ಕ್ಷೀರಸಾಗರ ಆದರೆ ಮನೆಯಲ್ಲಿ ತೊಟ್ಟು ಹಾಲಿಗೂ ತತ್ವಾರ. ಹಾಗೆ ಕೂಗಳತೆಯಲ್ಲಿ ಮಲಪ್ರಭೆ ಹರಿಯುತ್ತಿದ್ದರೂ ಅಣ್ಣಿಗೇರಿ ಜನತೆ ಹನಿ ಹನಿ ನೀರಿಗೂ ವಿಲವಿಲ.

ನಿರಂತರ ಜಲಕ್ಷಾಮದಿಂದ ಬಳಲುತ್ತಿರುವ ಅಣ್ಣಿಗೇರಿ ಪಟ್ಟಣಕ್ಕೆ ಮಲಪ್ರಭಾ ಕಾಲುವೆಯಿಂದ ಕುಡಿಯುವ ನೀರು ಶೀಘ್ರವೇ ಪೂರೈಕೆಯಾಗಲಿದ್ದು ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.

ಬಸಾಪುರ ಹತ್ತಿರ ಮಲಪ್ರಭಾ ಕಾಲುವೆ ಬಳಿಯ ಸುಮಾರು 76 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೆರೆ ಕಾಮಗಾರಿ ಶೇಕಡ 80ರಷ್ಟು ಮುಗಿದಿದ್ದು ಮುಂದಿನ ಎರಡ್ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟಿದೆ ಎಂದರೆ ಬೇಸಿಗೆಯಲ್ಲಂತೂ ಎರಡು ರೂಪಾಯಿಗೆ ಒಂದು ಬಿಂದಿಗೆ ನೀರನ್ನು ಖರೀದಿಸಿದ ಉದಾಹರಣೆಗಳಿವೆ.

ಇನ್ನೂ ಕೆರೆಯ ಕೆಲಸ ಪೂರ್ಣಗೊಂಡ ನಲ್ಲಿಗಳ ಮೂಲಕ ಪಟ್ಟಣಕ್ಕೆ 24/7 ನೀರನ್ನು ಪೂರೈಸುವ ಯೋಜನೆ ರೂಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಹಾಲಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮುತವರ್ಜಿಯಿಂದ ಯೋಜನೆ ಕಾರ್ಯಗತವಾಗುತ್ತಿದ್ದು ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಲಿದೆ.

ವಿಶೇಷ ವರದಿ ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/03/2022 03:33 pm

Cinque Terre

68.86 K

Cinque Terre

3

ಸಂಬಂಧಿತ ಸುದ್ದಿ