ಅಳ್ನಾವರಕ್ಕೆ ಈ ಬಾರಿ ಭೀಕರ ಜಲಕ್ಷಾಮ
ಅಳ್ನಾವರ: ಪಟ್ಟಣದ ಜನರು ಪ್ರತಿ ಬೇಸಿಗೆಯಲ್ಲಿಯೂ ನೀರಿನ ಬವಣೆ ಅನುಭವಿಸುತ್ತಿದ್ದು ಈ ಸಲವೂ ಕೂಡಾ ಸಮಸ್ಯೆ ಎದುರಾಗುತ್ತಿದೆ
ಎಕೈಕ ನೀರಿನ ಮೂಲವಾಗಿರುವ ಡೌಗಿ ಹಳ್ಳದ ಬ್ಯಾರೇಜ್ ಮಾರ್ಚ್ ತಿಂಗಳ ಹೊತ್ತಿಗೆ ಬತ್ತಿ ಹೋಗುತ್ತಿದ್ದು ಅದಕ್ಕೆ ಪರ್ಯಾಯವಾಗಿ ಸಮೀಪದ ಹುಲಿಕೇರಿ ಕೆರೆಯ ನೀರನ್ನು ಹಳ್ಳದ ಮೂಲಕ ತಂದು ಜನರಿಗೆ ಪೂರೈಸುವದು ವಾಡಿಕೆ.
ಆದರೆ ಈ ಸಲ ಆ ಕೆರೆಯಲ್ಲಿಯೂ ನೀರು ಇರದ ಕಾರಣ ಅಳ್ನಾವರ ಪಟ್ಟಣ ಪಂಚಾಯತಿಯವರು ಬೇರೆ ವ್ಯವಸ್ಥೆ ಮಾಡಿಕೊಳ್ಳುವದು ಅನಿವಾರ್ಯವಾಗಲಿದೆ
ಮುಂದಿನ ಏರಡು ತಿಂಗಳ ಬೇಸಿಗೆಯಲ್ಲಿ ಜನರು ನೀರಿಗಾಗಿ ಪರದಾಡಬೇಕಾಗಲಿದ್ದು ಸ್ಥಳಿಯ ಆಡಳಿತ ಸಮಸ್ಯೆ ಪರಿಹಾರಕ್ಕೆ ಯಾವ ಮಾರ್ಗ ಕಂಡುಕೊಳ್ಳಬಹುದು ಎನ್ನುವದು ಎಲ್ಲರ ಚಿತ್ತವಾಗಿದೆ.
Kshetra Samachara
18/03/2022 08:57 am