ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಾತ್ಕಾಲಿಕ ರಸ್ತೆ ಕಂಡ ಅಂಚಟಗೇರಿ ಓಣಿ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ಈರಣ್ಣ ವಾಲಿಕಾರ

ಹುಬ್ಬಳ್ಳಿ:ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್. ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಸುಮಾರು ದಿನಗಳಿಂದ ದುರಸ್ತಿ ಕಾಮಗಾರಿ ನಡೆಸಿದ್ದ ರಸ್ತೆಗೆ ತಾತ್ಕಾಲಿಕ ಮುಕ್ತಿ ಕೊಟ್ಟಿದ್ದಾರೆ.

ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದ ಮೂರುಸಾವಿರ ಮಠದ ಬಳಿ ಇರುವ ಅಂಚಟಗೇರಿ ಓಣಿಯ ರಸ್ತೆಯನ್ನು ಅಗೆದು ಹಾಗೇಯೆ ಬಿಡಲಾಗಿತ್ತು. ಇದರಿಂದ ಜನರಿಗೆ ತುಂಬ ತೊಂದರೆ ಉಂಟಾಗಿತ್ತು. ಇದನ್ನು ಕಂಡ ನಿಮ್ಮ ಪಬ್ಲಿಕ್ ನೆಕ್ಸ್ಟ್ ಎರಡು ದಿನಗಳ ಹಿಂದಷ್ಟೇ 'ಇದೇನು ರಸ್ತೆಯೋ ಅಥವಾ ಕೆರೆಯೋ' ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಬಿತ್ತರಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ವ್ಯಾಪಾರಸ್ಥರು ಮತ್ತು ಜನರಿಗೆ ಅನುಕೂಲವಾಗಲೆಂದು ತಾತ್ಕಾಲಿಕ ರಸ್ತೆ ಮಾಡಿದ್ದಾರೆ. ಇದಕ್ಕೆ ಅಲ್ಲಿನ ವ್ಯಾಪಾರಸ್ಥರು ಮತ್ತು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಮೂರುಸಾವಿರ ಮಠದ ಬಳಿ ಇರುವ ಜನತಾ ಬಜಾರ್‌ಗೆ ಕೂಡಿರುವ ಈ ರಸ್ತೆಯನ್ನು ವೈಜ್ಞಾನಿಕವಾಗಿ ಆದಷ್ಟು ಬೇಗ ಅಭಿವೃದ್ಧಿಯಾಗಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.

Edited By : Manjunath H D
Kshetra Samachara

Kshetra Samachara

24/02/2022 07:24 pm

Cinque Terre

18.97 K

Cinque Terre

0

ಸಂಬಂಧಿತ ಸುದ್ದಿ