ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸರ್ಕಾರಿ ಕಚೇರಿ ಆವರಣದ ಪರಿಸ್ಥಿತಿ ಹೀಗಾದ್ರೆ ಹೇಗೆ..?

ನವಲಗುಂದ : ಇದು ನವಲಗುಂದ ಪಟ್ಟಣದಲ್ಲಿನ ಹಳೆ ತಾಲ್ಲೂಕು ಕಚೇರಿ, ಹಳೆ ತಾಲೂಕು ಕಚೇರಿ ಅಂದ್ರೆ ಇಲ್ಲಿ ಯಾವ ಕಚೇರಿಗಳು ಕೆಲಸ ನಿರ್ವಹಿಸುವುದಿಲ್ಲ ಅಂತಾ ತಿಳಿಬೇಡಿ, ಇಲ್ಲಿ ಈಗಲೂ ಹಲವು ಇಲಾಖೆಯ ಕಚೇರಿ ಕೆಲಸಗಳು ನಡಿಯುತ್ತವೆ. ಹಾಗೇ ಇಲ್ಲಿ ದಿನಕ್ಕೆ ನೂರಾರು ಜನ ಬರ್ತಾರೆ. ಆದ್ರೆ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ.

ಅಧಿಕಾರಿಗಳಿಗೆ ಸರ್ಕಾರಿ ಕಚೇರಿಗಳು ಅಂದ್ರೆ ಅದೇನೋ ನಿರ್ಲಕ್ಷತನ ಅಂತಾರೆ ಸಾರ್ವಜನಿಕರು. ಈ ದೃಶ್ಯಗಳನ್ನು ನೋದಿದ್ರೆ, ಅದು ನಿಜಾ ಅನಿಸದೇ ಇರೋದಿಲ್ಲ. ಎಲ್ಲಿ ಬೆಕ್ಕಲ್ಲಿ ಗುಟ್ಕಾ, ಸಿಗರೇಟ್ ಮತ್ತು ಮದ್ಯಪಾನದ ಬಾಟಲ್ ಗಳು ಇಲ್ಲಿ ಕಾಣಸಿಗುತ್ತವೆ. ಕಚೇರಿಯ ಮುಂಬಾಗವಷ್ಟೇ ಕೊಂಚ ಸ್ವಚ್ಛ ಮಾಡಿದಂತೆ ಕಾಣುತ್ತದೆ.

ಇಷ್ಟೆಲ್ಲಾ ಅಸ್ವಚ್ಛತೆ ಇಲ್ಲಿ ಇದ್ರೂ ಸಹ ಇದುವರೆಗೂ ಯಾವ ಅಧಿಕಾರಿಗಳು ಸ್ವಚ್ಛತೆಗೆ ಅಥವಾ ನಿರ್ವಹಣೆಗೆ ಮುಂದಾಗಿಲ್ಲ, ಇದನ್ನ ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಿನ ಕ್ರಮಗವನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

05/02/2022 02:16 pm

Cinque Terre

26.33 K

Cinque Terre

0

ಸಂಬಂಧಿತ ಸುದ್ದಿ