ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಬಂದಿದೆ ನಾವು ಮಾತ್ರವಲ್ಲದೆ ಹುಬ್ಬಳ್ಳಿ ನಗರವೇ ಸ್ಮಾರ್ಟ್ ಆಗುತ್ತದೆ ಎಂದುಕೊಂಡಿದ್ದವರಿಗೆ ನಿರಾಶೆಯಾಗಿದೆ. ಸ್ಮಾರ್ಟ್ ಸಿಟಿಯಿಂದ ಅವಳಿನಗರಕ್ಕೆ ಸೌಂದರ್ಯ ಬಂದಿದೆಯೋ ಇಲ್ಲವೊ ಬಹುತೇಕ ಜನರಿಗೆ ಆಸ್ತಮಾ ಹಾಗೂ ಇನ್ನಿತರ ರೋಗ ಮಾತ್ರ ಬಂದಿವೆ. ಸ್ಮಾರ್ಟ್ ಆಗುವ ಬದಲಿಗೆ ಧೂಳು ಸಿಟಿಯಾಗಿದೆ.
ಅವಳಿನಗರವನ್ನು ಸ್ಮಾರ್ಟ್ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಹೆಸರಿನ ಒಂದು ಯೋಜನೆ ತಂದಿದೆ. ಆದರೆ ಈ ಯೋಜನೆಯಿಂದ ಸ್ಮಾರ್ಟ್ ಆಗಬೇಕಿದ್ದ ನಗರ ಸಂಪೂರ್ಣ ಧೂಳಿನಿಂದ ಕೂಡಿದ್ದು, ಅಸ್ತಮಾ, ಉಸಿರಾಟ ಸಂಬಂಧಿಸಿದ ಕಾಯಿಲೆಗಳು ಜನರಿಗೆ ಕಾಡುತ್ತಿವೆ. ಧೂಳು ಮುಕ್ತ ಮಾಡುವ ಜೊತೆಗೆ ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಿ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈಗಾಗಲೇ ವಾಣಿಜ್ಯನಗರಿ ಹುಬ್ಬಳ್ಳಿಯ ಪರಿಸ್ಥಿತಿ ನೋಡಿದರೇ ಕೊರೋನಾ, ಓಮೈಕ್ರಾನ್ ಗಾಗಿ ಜನರು ಮಾಸ್ಕ್ ಹಾಕುವುದಕ್ಕಿಂತ ಹೆಚ್ಚಾಗಿ ಧೂಳಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಪರದಾಡುವಂತಾಗಿದೆ. ಧೂಳಿನಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ಹೋದರೇ ಹಲವಾರು ರೋಗದ ಭಯ ಹುಟ್ಟುತ್ತದೆ ಎಂಬುವುದು ಸಾರ್ವಜನಿಕರ ಆತಂಕದ ಮಾತಾಗಿದೆ.
ಒಟ್ಟಿನಲ್ಲಿ ಕುಂಟುತ್ತಾ ಸಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರ ಜೀವನ ನಿಜಕ್ಕೂ ಅಕ್ಷರಶಃ ನರಕಯಾತನೆ ಅನುಭವಿಸುವಂತಾಗಿದೆ. ಕೂಡಲೇ ಎಚ್ಚೇತ್ತುಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರಿಗೆ ಸೌಲಭ್ಯ ಕೊಡದೇ ಇದ್ದರೂ ಆರೋಗ್ಯವಾಗಿ ಜೀವಿಸಲು ಅವಕಾಶ ಕೊಡಿ...
Kshetra Samachara
06/01/2022 05:48 pm