ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹೆಸ್ಕಾಂ ಅಧಿಕಾರಿಗಳೇ ಅತಿವೃಷ್ಟಿಗೆ ನೆಲಕ್ಕೆ ಬಿದ್ದ ಕಂಬ ದುರಸ್ತಿ ಮಾಡಿ

ಕುಂದಗೋಳ : ಹೆಸ್ಕಾಂ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸಾರ್ವಜನಿಕ ಸ್ಥಳದಲ್ಲಿ ನೆಲಕ್ಕೆ ಬಿದ್ದ ವಿದ್ಯುತ್ ಕಂಬವೊಂದು ಅಲ್ಲೇ ಖಾಯಂ ಉಳಿದು ಸಾರ್ವಜನಿಕರಿಗೆ ತೊಂದರೆ ಉಂಟಾದ ಸ್ಥಿತಿ ನಿರ್ಮಾಣವಾಗಿದೆ.

ಕುಂದಗೋಳ ತಾಲೂಕಿನ ಪುರ ಗ್ರಾಮದ ಕೆರೆ ಪಕ್ಕದ ರಸ್ತೆಯಲ್ಲಿ ವಿದ್ಯುತ್ ಕಂಬ ಕಳೆದ ಒಂದು ವಾರದ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಕೈ ಬಿಟ್ಟು ಅಧಿಕಾರಿಗಳು ಕಂಬದ ದುರಸ್ತಿ ಕಾರ್ಯ ಇಂದಿಗೂ ಕೈಗೊಂಡಿಲ್ಲ. ಈ ಕಾರಣ ಸಾರ್ವಜನಿಕರು ನಿತ್ಯ ಸಂಚರಿಸುವ ಸ್ಥಳದಲ್ಲಿ ಕಂಬ ಬಿದ್ದ ಕಾರಣ ಅಪಾಯದ ಮುನ್ಸೂಚನೆ ಎದುರಾಗಿದ್ದು ಕಂಬ ಬಿದ್ದ ಅಕ್ಕಪಕ್ಕದಲ್ಲೇ ಕೆರೆ ಹಾಗೂ ನೀರಿನ ಟ್ಯಾಂಕ್ ಸಹ ಇದೆ.

ಸಮಸ್ಯೆ ಇದಷ್ಟೇ ಅಲ್ಲದೇ ಪುರ ಗ್ರಾಮದಲ್ಲಿ ಅದೆಷ್ಟೋ ವಿದ್ಯುತ್ ಕಂಬಗಳ ವಯರ್ ಹಾಗೂ ಕಂಬಗಳು ತುಕ್ಕು ಹಿಡಿದರೂ ಹೆಸ್ಕಾಂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

09/12/2021 05:51 pm

Cinque Terre

25.71 K

Cinque Terre

0

ಸಂಬಂಧಿತ ಸುದ್ದಿ