ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಎ.ಬಿ.ಉಪ್ಪಿನ ಸನ್ಮಾನ ಗೌರವ

ಕುಂದಗೋಳ : ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ‌ ಡಾ.ಲಿಂಗರಾಜ ಅಂಗಡಿಯವರ ಕಾರ್ಯ ರೂಪುರೇಷೆಗೆ ಮತ್ತೋಂದು ಹೊಸ ಅವಕಾಶ ದೊರೆತಿದೆ, ಈ ಅವಕಾಶ ಅಭಿವೃದ್ಧಿ ಮೂಲಕ ಜನರಿಗೆ ತಲುಪಲಿ ಎಂದು ಸಂಶಿ ವಿರಕ್ತಮಠದ ಪರಮಪೂಜ್ಯ ಚನ್ನಬಸವದೇವರು ಹೇಳಿದರು‌.

ಅವರು ಸಂಶಿ ಗ್ರಾಮದಲ್ಲಿ ನಡೆದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ‌ ಡಾ‌.ಲಿಂಗರಾಜ ಅಂಗಡಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಎ.ಬಿ.ಉಪ್ಪಿನ ಮಾತನಾಡಿ ತಮ್ಮ ಮಹತ್ವದ ಕಾರ್ಯಗಳ ಮೂಲಕ ಹೆಸರಾದ ಡಾ.ಲಿಂಗರಾಜ ಅಂಗಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡಿ ಜನರಿಗೆ ಹತ್ತಿರವಾಗಲಿ ಎಂದರು. ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿಯವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಬಿ.ಬಿ.ಬೂದಿಹಾಳ, ಎಸ್.ಬಿ.ಪಾಟೀಲ್, ಸಿ.ವಿ.ಕೋರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಎಚ್.ಕೆ‌.ನೇಕಾರ, ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/12/2021 08:58 am

Cinque Terre

7.86 K

Cinque Terre

0

ಸಂಬಂಧಿತ ಸುದ್ದಿ