ನವಲಗುಂದ: ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಳೆದ ತಿಂಗಳಿನಿಂದ ತಾಲ್ಲೂಕಿನ ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳಿಂದ ಹಿಡಿದು ನವಲಗುಂದ ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಹ ಇತ್ತ ಗಮನ ಹರಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ...
ಹೌದು ಅಣ್ಣಿಗೇರಿ ತಾಲೂಕಿಗೆ ಒಳಪಡುವ ಬಸಾಪುರ ಗ್ರಾಮದ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ದುಸ್ಥಿತಿ ಇದು, ಬಸ್ ಸಂಚಾರ ಸರಿಯಾಗಿ ಇಲ್ಲ ಎಂಬ ಕಾರಣಕ್ಕೆ ಇಂದು ಸಹ ಬಸಾಪುರ ಕ್ರಾಸ್ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಇದಕ್ಕೆ ಕಾರಣ ಈ ಗ್ರಾಮಕ್ಕೆ ಪ್ರತಿದಿನ ಅರ್ಧ ಗಂಟೆಗೊಮ್ಮೆ ಬಸ್ಸುಗಳೆನೋ ಇವೆ. ಆದರೆ ಬರುವಂತ ಪ್ರತಿ ಬಸ್ಸುಗಳು ಸಹ ಸಂಪೂರ್ಣ ಭರ್ತಿಯಾಗಿರುತ್ತವೆ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪವಾಗಿದೆ. ಇನ್ನು ಬಸ್ಸುಗಳು ಗ್ರಾಮದ ಒಳಗೆ ಬರಲ್ವಂತೆ, ಗ್ರಾಮದಿಂದ ಬಸಾಪುರ ಕ್ರಾಸ್ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಇದೆ. ಅಲ್ಲಿಯವರೆಗೆ ಗ್ರಾಮಸ್ಥರು ನಡೆದುಕೊಂಡೆ ಹೋಗಿ ಬಸ್ ಹತ್ತುವ ಅನಿವಾರ್ಯತೆ ಬಂದಿದೆ.
ಇದಕ್ಕೆ ಸೂಕ್ತ ಪರಿಹಾರ ಅಂದ್ರೆ ನೇರವಾಗಿ ಬಸಾಪುರ ಗ್ರಾಮಕ್ಕೆ ಬಸ್ ಬಿಡಬೇಕು ಮತ್ತು ಬಸಾಪುರದ ವಾಯವಾಗಿ ಸಂಚರಿಸುವ ಬಸ್ ಗಳು ಗ್ರಾಮದ ಒಳಗೆ ಹೋಗಬೇಕು ಎಂಬುದೇ, ಈ ಬಗ್ಗೆ ಶಾಸಕರು ಮತ್ತು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರೇ ಮುತುವರ್ಜಿ ವಹಿಸಿ, ಬಸ್ಸಿನ ಸರಿಯಾದ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಿದ್ದಲ್ಲಿ, ಗ್ರಾಮಸ್ಥರು ಪ್ರತಿದಿನ ಪರಿತಪಿಸುವಂತ ಪರಿಸ್ಥಿತಿ ದೂರವಾಗಲಿದೆ.
Kshetra Samachara
02/12/2021 01:50 pm