ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಆದರೂ ಕೂಡ ಅನಧಿಕೃತ ಕಟ್ಟಡಗಳ ಕಡಿವಾಣಕ್ಕೆ ಮಾತ್ರ ಪಾಲಿಕೆ ಆಮೆಗತಿಯ ವೇಗದಲ್ಲಿ ಹೊರಟಿದೆ.
ಅವಳಿನಗರದಲ್ಲಿ ಅನಧಿಕೃತ ಕಟ್ಟಡಗಳು ಈ ಹಿಂದೆಯೇ ತಲೆ ಎತ್ತಿದ್ದು, ಸುಮಾರು ಕಟ್ಟಡಗಳು ಸಾರ್ವಜನಿಕ ಆಸ್ತಿಯಲ್ಲಿಯೇ ರಾರಾಜಿಸುತ್ತಿವೆ. ಆದರೆ ಇಂತಹ ಕಟ್ಟಡಗಳಿಗೆ ಇದುವರೆಗೂ ಪಾಲಿಕೆ ಮಾತ್ರ ಸಮರೋಪಾಧಿಯಲ್ಲಿ ಕಾರ್ಯಾಚರಣೆ ನಡೆಸಿಲ್ಲ. ಯಾರಾದರೂ ದೂರು ನೀಡಿದರೇ ಮಾತ್ರ ಕ್ರಮ ಕೈಗೊಳ್ಳುವ ಬಗ್ಗೆ ಮಹಾನಗರ ಪಾಲಿಕೆ ಮಾಹಿತಿ ನೀಡುತ್ತಿದೆ. ಆದರೆ ಯಾವುದೇ ರೀತಿಯಲ್ಲಿ ಸ್ವಯಂಪ್ರೇರಿತವಾಗಿ ಅನಧಿಕೃತ ಕಟ್ಟಡಗಳ ಕಾರ್ಯಾಚರಣೆಗೆ ಮಾತ್ರ ಪಾಲಿಕೆ ಮುಂದಾಗುತ್ತಿಲ್ಲ.
ಅನಧಿಕೃತ ಕಟ್ಟಡಗಳಿಂದ ಸರ್ಕಾರಕ್ಕೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಕೂಡ ಸಾಕಷ್ಟು ಸಮಸ್ಯೆಯಾಗುತ್ತಿವೆ. ಆದರೆ ಪಾಲಿಕೆ ಬೆರಳು ಎಣಿಕೆಗೆ ಕೆಲವೊಂದು ನೋಟಿಸ್ ನೀಡಿ ಕಾರ್ಯಚರಣೆ ನಡೆಸಿದೆ. ಆದರೆ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಒತ್ತುವರಿ, ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ. ಅಲ್ಲದೆ ಅವಳಿನಗರದಲ್ಲಿ ಸುಮಾರು ಅನಧಿಕೃತ ಕಟ್ಟಡಗಳು ಪ್ರಭಾವಿಗಳ ಹೆಸರಲ್ಲಿ ಇರುವುದರಿಂದ ಪಾಲಿಕೆ ಹಿಂದೇಟು ಹಾಕುತ್ತಿದೆಯಾ ಎಂಬುವಂತ ಅನುಮಾನ ಕಾಡತೋಡಗಿದೆ.
ಒಟ್ಟಿನಲ್ಲಿ ಕಣ್ಣಿಗೆ ಕಂಡರು ಕಾಣದಂತೆ ಅನಧಿಕೃತ ಕಟ್ಟಡಗಳಿಗೆ ಪಾಲಿಕೆ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನಾದರೂ ಮಹಾನಗರ ಪಾಲಿಕೆ ಅನಧಿಕೃತ ಕಟ್ಟಡಗಳ ವಿರುದ್ಧ ಸಮರೋಪಾಧಿಯಲ್ಲಿ ಸಮರ ಸಾರಿ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ.
Kshetra Samachara
23/11/2021 01:16 pm