ಹುಬ್ಬಳ್ಳಿ: ನಮಸ್ಕಾರ ಹುಬ್ಬಳ್ಳಿ ಮಂದಿಗೆ ಹ್ಯಾಂಗ ಇದ್ದೀರಿ. ನೀವು ಏನ ಬಿಡ್ರಿ ಲಾಕ್ ಡೌನ್ ಓಪನ್ ಆಯ್ತು ಅಂತ ಅರಾಮ ಇದ್ದೀರಿ. ಹಾಗಿದ್ರ ಸುಮ್ಮನೆ ಕುಂತು ಏನ ಮಾಡ್ತಿರಿ ನಿಮಗೆ ಒಂದು ವಿಶೇಷ ರಸ್ತೆ ಪರಿಚಯ ಮಾಡಸ್ತೀವಿ ಬರ್ರಿ.... ನಿಮ್ಮ ಹುಬ್ಬಳ್ಳ್ಯಾಗ ಒಂದು ಆತಂಕಕಾರಿ ರಸ್ತೆಯನ್ನು ನೀವು ನೋಡಲೇ ಬೇಕು...
ನೋಡ್ರಿ.. ಹುಬ್ಬಳ್ಳಿಯ ಕೇಶ್ವಾಪೂರದ ಸರಸ್ವತಿಪುರಂ ಕಾಲೋನಿಯ ರಸ್ತೆ ಪರಿಸ್ಥಿತಿ... ಇಲ್ಲಿ ಅಪ್ಪಿ ತಪ್ಪಿ ಏನಾದರೂ ಬಂದರೇ ನಿಮ್ಮ ಸೊಂಟ, ಬೆನ್ನು ಮೂಳೆ ಮುರಿಯೋದಂತೂ ಗ್ಯಾರಂಟಿ.. ಇಂತಹ ರೋಡಿನಲ್ಲಿ ಈಗಾಗಲೇ ಸಾಕಷ್ಟು ಜನ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನೂ ದುರದೃಷ್ಟಕರ ಸಂಗತಿ ಅಂದರೇ ಇಲ್ಲಿ ಹೆಚ್ಚಾಗಿ ಶಾಲೆಯ ಮಕ್ಕಳು ಹೆಚ್ಚಾಗಿ ಸಂಚರಿಸುವುದರಿಂದ ದಿನವೂ ಸಮಸ್ಯೆ ಅನುಭವಿಸಿಯೇ ಮುಂದೆ ಸಾಗಬೇಕಿದೆ ನೋಡ್ರಿ..
ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿ ಹೆಸರಿಗೆ ಮಾತ್ರ ರಾಜ್ಯದ ಎರಡನೇ ಮಹಾನಗರ. ಇಲ್ಲಿನ ಸಮಸ್ಯೆ ನೋಡಿದರೇ ಇದು ಯಾವ ಮಹಾನಗರ ಅನಿಸುತ್ತದೆ. ಇಲ್ಲಿ ಮಳೆ ಆದರೆ ಮುಗಿತು ನೋಡ್ರಿ. ರಸ್ತೆಯಲ್ಲ ಸಂಪೂರ್ಣ ಕೆಸರು ಗದ್ದೆ ಆಗುತ್ತದೆ. ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ.
ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಇನ್ನೂ ನಮ್ಮ ಗಮನಕ್ಕೆ ಬಂದಿಲ್ಲ ಅಂತಿದ್ದಾರೆ. ಹಿಂಗಾದರೇ ಹೆಂಗೆ.. ಇಷ್ಟ ದೊಡ್ಡ ಸಮಸ್ಯೆಯೇ ಅವರಿಗೆ ಕಾಣುತ್ತಿಲ್ಲ ಅಂದರೆ ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳನ್ನು ದೇವರೇ ಬಂದು ಬಗೆಹರಿಸಬೇಕಿದೆ.
Kshetra Samachara
16/11/2021 04:50 pm