ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ತಾಪಂ ಕಚೇರಿ ಮುಂದೆ ಹಾರಾಡಬೇಕಿದೆ ಹೊಸ ರಾಷ್ಟ್ರ ಧ್ವಜ

ಕುಂದಗೋಳ: ನಿತ್ಯ 26 ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ನೂರಾರು ಜನ ಭೇಟಿ ನೀಡುವ ತಾಲೂಕು ಪಂಚಾಯಿತಿ ಕಚೇರಿ ಮುಂದಿನ ರಾಷ್ಟ್ರ ಧ್ವಜ ಬಣ್ಣ ಮಾಸಿದ್ದರು ಬದಲಾಗದೆ ಇರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇಲ್ನೋಡಿ ಕೇಸರಿ ಬಣ್ಣ ಸಂಪೂರ್ಣ ಮಾಸಿ ಹೋಗಿರುವ ರಾಷ್ಟ್ರ ಧ್ವಜವನ್ನೇ ಅಲಂಕರಿಸಿಕೊಂಡು ತಾಲೂಕು ಪಂಚಾಯಿತಿ ನಿಯಮ ಪಾಲಿಸುತ್ತಿದೆ. ಆದರೆ ನಿತ್ಯ ಇಲಾಖೆಗೆ ಬರೋ ಸಾರ್ವಜನಿಕರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಇದೇ ತಾಲೂಕು ಪಂಚಾಯಿತಿಗೆ ಅದೆಷ್ಟೋ ಸಲ ಭೇಟಿ ಕೊಟ್ಟರು ಮತ್ತು ಪ್ರಗತಿ ಪರಿಶೀಲನಾ ಸಭೆ ಇಲ್ಲೇ ಜರುಗುತ್ತಿದ್ದರು ಅಧಿಕಾರಿಗಳು ಮಾತ್ರ ಹೊಸ ಧ್ವಜ ಅಳವಡಿಸದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಇಡೀ ತಾಲೂಕಿಗೆ ಕಿರೀಟ ಪ್ರಾಯವಾಗಿರುವ ತಾಲೂಕು ಪಂಚಾಯಿತಿ ಕಟ್ಟಡದ ಮುಂದಿನ ರಾಷ್ಟ್ರ ಧ್ವಜ ಬದಲಾಯಿಸಿ ಹೊಸ ಧ್ವಜ ಹಾರಿಸಬೇಕಿದೆ.

Edited By : Manjunath H D
Kshetra Samachara

Kshetra Samachara

12/10/2021 05:30 pm

Cinque Terre

45.55 K

Cinque Terre

1

ಸಂಬಂಧಿತ ಸುದ್ದಿ