ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗ್ರಾಮ ಪಂಚಾಯ್ತಿ ಲೋಕೋಪಯೋಗಿ ಇಲಾಖೆ ಯಾವಾಗ ಈ ರಸ್ತೆ ದುರಸ್ತಿ ?

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಯ ಅಲ್ಲಾಪೂರ ಕಡಪಟ್ಟಿ ಗ್ರಾಮದಿಂದ ಹಳ್ಯಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅವ್ಯವಸ್ಥೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತಾಲೂಕಿನ ಲೋಕೋಪಯೋಗಿ ಇಲಾಖೆ ಇದೆಯೋ ಇಲ್ಲವೋ ಎಂಬ ಸಂಶಯಕ್ಕೆ ಕಾರಣವಾಗಿದೆ.

ಈ ರೀತಿ ಕೊಳಚೆ ನೀರು ಸಂಗ್ರಹವಾಗಿ ಮಾರುದ್ದ ತಗ್ಗು ಗುಂಡಿ ಬಿದ್ದಿರುವ ರಸ್ತೆಯನ್ನೊಮ್ಮೆ ನೋಡ್ಬಿಡಿ, ಕಳೆದ ಹಲವಾರು ವರ್ಷಗಳಿಂದ ಇದೇ ಅವ್ಯವಸ್ಥೆಯಲ್ಲಿರುವ ರಸ್ತೆ ಸಂಚಾರ ಸಾರಿಗೆ ಬಸ್ ಖಾಸಗಿ ವಾಹನ ಸವಾರರು ಸೇರಿದಂತೆ ಕೃಷಿ ಚಟುವಟಿಕೆ ಕೈಗೊಳ್ಳುವ ರೈತರು ನರಕಯಾತನೆ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಪರಿಸ್ಥಿತಿ ಹೀಗಿದ್ದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ರಸ್ತೆಗೆ ಹಿಡಿ ಮಣ್ಣು ಹಾಕುವ ಯೋಚನೆ ಮಾಡಿಲ್ಲ.

ಈ ರಸ್ತೆ ಅವ್ಯವಸ್ಥೆ ಪ್ರಯಾಣಕ್ಕೆ ರೋಸಿಹೋದ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಮಾಡುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

13/09/2021 02:51 pm

Cinque Terre

20.33 K

Cinque Terre

0

ಸಂಬಂಧಿತ ಸುದ್ದಿ