ಕುಂದಗೋಳ : ಇಂದಿನ ಮಕ್ಕಳ ಆಹಾರ ಕ್ರಮದಿಂದ ಸಣ್ಣ ಮಯಸ್ಸನಲ್ಲೇ ರೋಗಕ್ಕೆ ತುತ್ತಾಗುವ ಭೀತಿಯ ಜೊತೆ ಆರೋಗ್ಯಕರ ಬೆಳವಣಿಗೆ ಪೂರಕವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಹೇಳಿದರು.
ಅವರು ಕುಂದಗೋಳ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಏರ್ಪಡಿಸಿದ್ಧ ಮಕ್ಕಳ ಶಾರೀರಿಕ ದೈಹಿಕ ಬೆಳವಣಿಗೆ ಸಲಹಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಬೆಳವಣಿಗೆ ಅಭಿವೃದ್ದಿ ಹೊಂದುವುದರ ಜೊತೆಗೆ ಮಾನಸಿಕ ಬುದ್ಧಿ ಮಟ್ಟ ಚುರುಕಾಗಲೂ ಯಾವ ಆಹಾರ ಕ್ರಮ ಕೈಗೊಳ್ಳಬೇಕು ಎಂದು ಪಾಲಕರಿಗೆ ಅರಿವು ಮೂಡಿಸಿದರು.
ಬಳಿಕ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ 150 ಮಕ್ಕಳಿಗೆ ಪೌಷ್ಟಿಕ ಆಹಾರದ ಪದಾರ್ಥದ ಪಾಕೆಟ್ ವಿತರಿಸಿ ಸಿಡಿಪಿಓ ಅನ್ನಪೂರ್ಣ ಸಂಗಳದ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸರ್ವ ಸೇವಕರು ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
Kshetra Samachara
31/07/2021 01:47 pm