ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಮರಿಚಿಕೆಯಾದ,ಕಲಘಟಗಿ-ತಡಸ ರಾಜ್ಯ ಹೆದ್ದಾರಿ ಅಭಿವೃದ್ಧಿ:ಅಪಘಾತ ಭಯದಲ್ಲಿ ವಾಹನ ಸವಾರರು

ಕಲಘಟಗಿ:ಕಲಘಟಗಿ-ತಡಸ ರಾಜ್ಯ ರಸ್ತೆ ಹಾಳಾಗಿದ್ದು,ಶಾಶ್ವತ ಅಭಿವೃದ್ಧಿ ಕಾಣದೆ ದೂರದ ಪ್ರಯಾಣಿಕರು ನಿತ್ಯ ಹಾಳಾದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡ ಬೇಕಿದೆ.

ಡಾ ನಂಜುಂಡಪ್ಪ ವರದಿಯಂತೆ ಅಂತ್ಯಂತ ಹಿಂದುಳಿದ ಕಲಘಟಗಿಯಲ್ಲಿ ಹಾಯ್ದು ಹೋಗಿರುವ ಕಲಘಟಗಿ-ತಡಸ 18 ಕಿ ಮೀ ರಸ್ತೆ ಕಿತ್ತು ಅಲ್ಲಲ್ಲಿ ಕಲ್ಲುಗಳು ಎದ್ದಿದ್ದು,ವಾಹನ ಸವಾರರು ನಿತ್ಯ ತಗ್ಗುಬಿದ್ದ ರಸ್ತೆಯಲ್ಲಿ ಸಂಚರಿಸಲು‌ ನರಕಯಾತನೆ ಅನುಭವಿಸುವಂತಾಗಿದೆ.

ಕಲಘಟಗಿ-ತಡಸ ರಸ್ತೆ ಅಭಿವೃದ್ಧಿ ಯಾವಾಗ ಎಂಬ ಪ್ರಶ್ನೆ ಈ ಭಾಗದ ಗ್ರಾಮೀಣ ಜನರನ್ನು ಕಾಡುತ್ತಿದೆ. ಇನ್ನಾದರೂ ಸರಕಾರ,ಕಲಘಟಗಿ-ತಡಸ ರಸ್ತೆಯ ಶಾಶ್ವತ ಅಭಿವೃದ್ಧಿಗೆ ಅನುದಾನ ಕಲ್ಪಿಸುವುದೇ ಎಂಬುದನ್ನು‌‌ ಕಾದು ನೋಡ ಬೇಕಿದೆ.

Edited By : Manjunath H D
Kshetra Samachara

Kshetra Samachara

20/02/2021 09:26 pm

Cinque Terre

18.03 K

Cinque Terre

1

ಸಂಬಂಧಿತ ಸುದ್ದಿ