ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆದಷ್ಟ ಜಲ್ದಿ ಬ್ರಿಡ್ಜ್ ಕಟ್ಟಿ, ಡಾಂಬರೀಕರಣ ಮಾಡ್ರಿ

ನವಲಗುಂದ: ತಾಲೂಕಿನ ಬೆಳಹಾರ ಗ್ರಾಮದಿಂದ ಅಣ್ಣಿಗೇರಿ ರಸ್ತೆಗೆ ಹೋಗುವ ದಾರಿ ಇದು, ರೈತರಿಗೆ ತಮ್ಮ ಹೊಲಗಳಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದೆ. ಆದರೆ ಈ ರಸ್ತೆಯಲ್ಲಿ ರೈತರಿಗೆ ದುಸ್ವಪ್ನದಂತೆ ಕಾಡುತ್ತಿರೋದು ಈ ಹಳ್ಳ ಅಂದ್ರು ತಪ್ಪಿಲ್ಲಾ

ಒಟ್ಟು 14 ಗ್ರಾಮದ ಜನರಿಗೆ ಈ ರಸ್ತೆ ಅನಿವಾರ್ಯವಾಗಿದೆ. ಇನ್ನು ರೈತರು ತಾವು ಬೆಳೆದ ಬೆಳೆಯನ್ನು ಅಣ್ಣಿಗೇರಿ ಎಪಿಎಂಸಿ ಗೆ ಕೊಂಡೊಯ್ಯಬೇಕು ಅಂದ್ರೆ ಇದೆ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಕೂಡ ಇದೆ. ಇನ್ನು ಚಕ್ಕಡಿ, ಟ್ರ್ಯಾಕ್ಟರ್ ಗಳೊಂದಿಗೆ ರೈತರು ತಮ್ಮ ತಮ್ಮ ಹೊಲಗಳಿಗೆ ಇದೆ ರಸ್ತೆಯಲ್ಲಿ ಹಾದು ಹೋಗ್ತಾರೆ ಆದ್ರೆ ಈ ಹಳ್ಳದಿಂದ ಅವರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಇನ್ನು ಈ ರಸ್ತೆ ಸಂಪೂರ್ಣವಾಗಿ ಡಾಂಬರೀಕರಣ ಆಗಬೇಕು ಮತ್ತು ಹಳ್ಳಕ್ಕೆ ಸರಿಯಾದ ಸೇತುವೆ ನಿರ್ಮಾಣ ಆಗಬೇಕು ಎಂಬುದು ಗ್ರಾಮಸ್ತರ ಆಗ್ರಹವಾಗಿದೆ. ಅಷ್ಟೇ ಅಲ್ಲದೇ ಈ ಹಳ್ಳದಲ್ಲಿ ರೈತರು ಅದೆಷ್ಟೋ ಬಾರಿ ವಾಹನಗಳೊಂದಿಗೆ ಬಿದ್ದಿರುವ ಉದಾಹರಣೆಗಳಿವೆ. ಇನ್ನು ಈ ರಸ್ತೆಯಿಂದ ಪ್ರತಿನಿತ್ಯ ರೈತರು ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ.

ಇನ್ನು ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದೆ ಬರುವಂತಹ ಅನುದಾನದಲ್ಲಿ ಗ್ರಾಮಸ್ತರ ಬೇಡಿಕೆಯಂತೆ ಡಾಂಬರೀಕರಣ ಮಾಡಿಸುತ್ತೇವೆ ಅಂತಾ ಅಧಿಕಾರಿಗಳು ಸಹ ಈಗಾಗಲೇ ಭರವಸೆಯನ್ನು ಸಹ ನೀಡಿದ್ದಾರೆ. ಅಧಿಕಾರಿಗಳೆನೋ ಭಾರವಸೆಯನ್ನು ನೀಡಿದ್ದಾರೆ. ಆದ್ರೆ ಕಾಮಗಾರಿ ಯಾವಾಗ ಆರಂಭವಾಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕಿದೆ.

ವರದಿ: ವಿನೋದ ಇಚ್ಛಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

19/02/2021 08:49 pm

Cinque Terre

36.34 K

Cinque Terre

0

ಸಂಬಂಧಿತ ಸುದ್ದಿ