ಕುಂದಗೋಳ : ಕುಂದಗೋಳ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಕರ್ಮಕಾಂಡದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ ಸುದ್ದಿ ಒಂದೇ, ಎರಡಾ ಸುತ್ತ 57 ಹಳ್ಳಿಗಳಿಗೆ ಆರೋಗ್ಯ ಸಂಜೀವಿನಿ ಆಗಬೇಕಾದ ಆಸ್ಪತ್ರೆ ಅನೈರ್ಮಲ್ಯದ ಗೂಡಾಗಿದೆ. ಈ ಬಗ್ಗೆ ನಾವು ಸರಣಿ ಸುದ್ಧಿ ಪ್ರಕಟಿಸಿ ಸುಸ್ತಾದ್ರೂ ಅಲ್ಲಿನ ವ್ಯವಸ್ಥೆ ಇನ್ನಷ್ಟು ಹಾಳಾಗಿದೆ ಹೊರತು ಅಭಿವೃದ್ಧಿ ಆಗಿಲ್ಲ.
ಈ ಅವ್ಯವಸ್ಥೆಗೆ ರೋಸಿಹೋದ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ಆಪರೇಷನ್ ನಿಮಿತ್ತ ದಾಖಲು ಮಾಡಿದ ವ್ಯಕ್ತಿಯೊಬ್ಬರು ಪಬ್ಲಿಕ್ ನೆಕ್ಸ್ಟ್ ಗೆ ಕರೆ ಮಾಡಿ ಏನು ಹೇಳಿದ್ರೂ ನೀವೆ ಕೇಳಿ...ಅನೈರ್ಮಲ್ಯದ ಕುರಿತು ಇಡೀ ತಾಲೂಕಿಗೆ ಕೋವಿಡ್ ಸ್ವಚ್ಚತೆ, ಮಾಸ್ಕ್ ಬಳಕೆ ಬಗ್ಗೆ ಪಾಠ ಹೇಳಿದ ನುರಿತ ವೈದ್ಯರು ತುಂಬಿರೋ ಆಸ್ಪತ್ರೆಯಲ್ಲೇ ಸ್ವಚ್ಚತೆ ಕಾಣದ ಶೌಚಾಲಯ, ಗುಟ್ಕಾ, ಎಲೆ, ಅಡಿಕೆ ಸಂಗ್ರಹವಾಗಿರೋ ಸಿಂಕ್, ಎಲ್ಲೇಂದರಲ್ಲಿ ಜಾಡು ಕಟ್ಟಿದ ಕಸ, ಸ್ನಾನಗೃಹದಲ್ಲಿ ತುಂಬಿದ ನೀರು ಛೇ...ಛೇ....ಇದಿಷ್ಟಲ್ಲದೆ ಆಸ್ಪತ್ರೆ ಆವರಣದಲ್ಲಿ ಸುತ್ತಾಡೋ ಹಂದಿಗಳು ಇಷ್ಟೇಲ್ಲಾ ಅನೈರ್ಮಲ್ಯ ಇದೆ ಸಾರ್ ತಗೋಳಿ ನ್ಯೂಸ್ ಮಾಡ್ರಿ ನನಗಾದ ಪರಿಸ್ಥಿತಿ ಬೇರೆಯವರಿಗೆ ಆಗೋದು ಬೇಡಾ ಎಂದು ಸ್ವತಃ ಆಸ್ಪತ್ರೆಗೆ ಬಂದಾತನೇ ವಿಡಿಯೋ ನೀಡಿ ಏನು ಹೇಳಿದ್ರೂ ನೀವೆ ಕೇಳಿ.
ಕೇವಲ ಸ್ವಚ್ಚತೆ ಅಷ್ಟೇ ಅಲ್ಲಾ ಆಸ್ಪತ್ರೆ ಒಳಗೆ ನುರಿತ ಆಪರೆಷನ್ ತಜ್ಞರು ಇಲ್ಲಾ, 100 ಬೆಡ್ ಹೊಂದಿರೋ ಆಸ್ಪತ್ರೆಗೆ ಸ್ಕ್ಯಾನಿಂಗ್ ಸೆಂಟರ್ ಇಲ್ಲಾ, ಇನ್ನು ಆಸ್ಪತ್ರೆಗೆ ಲಭ್ಯವಿರಬೇಕಾದ ಸ್ವಚ್ಚತಾ ಸಿಬ್ಬಂದಿಗಳ ಅತಿ ಕಡಿಮೆ ಜನ ಮಾತ್ರ ಸಿಬ್ಬಂದಿ ಕೇವಲ ಮಾಸಿಕ 2 ಸಾವಿರ ರೂಪಾಯಿ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೈದ್ಯಕೀಯ ಸಿಬ್ಬಂದಿಗಳು ನರ್ಸ್ ರೋಗಿಗಳಿಗೆ ಕೇರ್ ಮಾಡಲ್ವಂತೆ ಇದೆಲ್ಲಾ ನಾವ್ ಹೇಳ್ತಿಲ್ಲ ಸಾರ್ವಜನಿಕರ ಅಭಿಪ್ರಾಯ.
ಸ್ವತಃ ರೋಗಿಯ ಸಂಬಂಧಿಗಳ ಪಾಡು ಕೇಳಿದ ಮಾನ್ಯ ಜನ ಪ್ರತಿನಿಧಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳತಾರೋ ಕಾದು ನೋಡಬೇಕಿದೆ.
Kshetra Samachara
24/01/2021 12:33 pm