ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ! ಜೀವಕ್ಕಾಗಿ ಕಾದುಕುಳಿತಿವೆ ವಿದ್ಯುತ್ ಟ್ರಾನ್ಸ್ ಫಾರ್ಮ್

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹೀಗೆ ಕೈಗೆ ನಿಲುಕುವ ವಿದ್ಯುತ್ ಸಂಪರ್ಕ ತಂತಿಗಳು, ಬಾಯಿ ತೆಗೆದುಕೊಂಡೆ ಇರುವಂತಹ ವಿದ್ಯುತ್ ತಂತಿ ವಿತರಣಾ ಪೆಟ್ಟಿಗೆಗಳು, ಸದಾ ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿಯಲ್ಲಿ.....

ಸುರಕ್ಷತಾ ಕ್ರಮಗಳಿದ್ದರೂ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಹೆಸ್ಕಾಂ ಇಲಾಖೆ ವಿಫಲವಾದ ಪರಿಣಾಮ, ಹುಬ್ಬಳ್ಳಿ ಧಾರವಾಡ ಅವಳಿನಗರಲ್ಲಿ ಸಾರ್ವಜನಿಕ ವಿದ್ಯುತ್ ವ್ಯವಸ್ಥೆ ಸದಾ ಅಪಾಯಕ್ಕೆ ಮುಕ್ತ ಆಹ್ವಾನ ನೀಡುತ್ತಿದೆ. ಹೆಸ್ಕಾಮ್ ಅವ್ಯವಸ್ಥೆ ಮರ್ಮ ಅರಿಯದ ಮುಗ್ಧ ಜನರು, ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯವಾಗಿದೆ. ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರು ಹಿಂದೇಟು ಹಾಕಿದ್ರೆ ವಿದ್ಯುತ್ ಸಂಪರ್ಕವನ್ನೆ ಕಡಿತಗೊಳಿಸುವ ಹೆಸ್ಕಾಮ್, ಅವಳಿನಗರದಲ್ಲಿ ಸಾರ್ವಜನಿಕ ವಿದ್ಯುತ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮುಂದಾಗದೇ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ .....

Edited By : Manjunath H D
Kshetra Samachara

Kshetra Samachara

17/10/2020 01:46 pm

Cinque Terre

48.14 K

Cinque Terre

2

ಸಂಬಂಧಿತ ಸುದ್ದಿ