ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯಾರ್ಥಿಗಳಿಂದ ವಿಮಾನ ಹಾಗೂ ಸ್ಪೋರ್ಟ್ಸ್ ಕಾರ್ ತಯಾರಿ: ವಾಣಿಜ್ಯನಗರಿಗೆ ಹೆಮ್ಮೆಯ ಗರಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ವಿಮಾನ ಹಾಗೂ ಅತಿ ವೇಗದ ಸ್ಪೋರ್ಟ್ಸ್ ಕಾರ್ ಗಳನ್ನು ತಯಾರಿಸುವ ಮೂಲಕ ಸೀ ಇಂಡಿಯಾ ರಾಷ್ಟ್ರೀಯ ಮಟ್ಟದ ಕಾಂಪಿಟೇಶನ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಹೌದು..ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ 7.5 ಭಾರವನ್ನು ಹೊತ್ತು ಮೇಲಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿರುವ ವಿಮಾನವನ್ನು ತಯಾರಿಸಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನ ಗ್ರೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನ ಗಳಿಸಿಕೊಂಡಿವೆ.

ವಿಮಾನ ತಯಾರಿಸಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ಹಾಗೂ ಕಾರು ತಯಾರಿಸಿ ಪ್ರಥಮ ಸ್ಥಾನ ಗಳಿಸಿರುವ ತಂಡಕ್ಕೆ ಎರಡು ಲಕ್ಷ ಬಹುಮಾನ ನೀಡಲಾಗಿದೆ. ಇನ್ನೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯಿಂದ ಪ್ರಶಂಸೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ತಯಾರಿಸಿದ ಕಾರ್ ಹಾಗೂ ವಿಮಾನವನ್ನು ಬಿವಿಬಿ ಕಾಲೇಜಿನ ಎದುರು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹದೊಂದು ಪ್ರಾಜೆಕ್ಟ್ ಮಾಡಿ ಪ್ರಶಸ್ತಿ ಗೆದ್ದಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ತಮ್ಮ ಪ್ರಾಜೆಕ್ಟ್ ಬಗ್ಗೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Edited By : Somashekar
Kshetra Samachara

Kshetra Samachara

23/09/2022 02:02 pm

Cinque Terre

22.26 K

Cinque Terre

6

ಸಂಬಂಧಿತ ಸುದ್ದಿ