ಹುಬ್ಬಳ್ಳಿ: ಆಯುಧ ಪೂಜೆ ಹಿನ್ನಲೆಯಲ್ಲಿ ಜನ ಜಂಗುಳಿಯಿಂದ ತಂಬಿರಬೇಕಾಗಿದ್ದ ಹುಬ್ಬಳ್ಳಿಯ ಮಾರುಕಟ್ಟೆಗಳು ಖಾಲಿ ಖಾಲಿಯಾಗಿದೆ.
ಬೆಲೆ ಏರಿಕೆಯಿಂದ ಬೇಸತ್ತ ಜನತೆ ಖರೀದಿಯಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಕೋವಿಡ್ ಸಂದರ್ಭದಲ್ಲಿ ಕೂಡ ಜನರು ಖರೀದಿಗೆ ಆಗಮಿಸಿದ್ದರು ಆದರೆ ಈ ವರ್ಷ ಕೋವಿಡ್ ಪ್ರಕರಣ ಕಡಿಮೆ ಇದ್ದರೂ ಬೆಲೆ ಏರಿಕೆ ಬಿಸಿಯಿಂದ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ.
ಇನ್ನೂ ಆಯುಧ ಪೂಜೆಗೆ ಬೇಕಾಗಿರುವ ಕಬ್ಬು, ಬಾಳೆದಿಂಡು, ಮಾವಿನ ತೋರಣ, ಹೂವುಗಳನ್ನು ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದು, ವ್ಯಾಪರವಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
Kshetra Samachara
14/10/2021 04:20 pm