ಅಣ್ಣಿಗೇರಿ: ಸ್ವಾಮಿ ಸರ್ಕಾರ ಸ್ವಚ್ಚ ಭಾರತ ಪರಿಕಲ್ಪನೆಯಲ್ಲಿ ಈ ಗ್ರಾಮಗಳ ಅಭಿವೃದ್ಧಿಗಾಗಿ ಯಾವ ಯೋಜನೆ ಜಾರಿಗೆ ತಂದರೂ ಈ ಅಣ್ಣಿಗೇರಿ ಗ್ರಾಮದ ಜನತ್ ನಗರದ ಹೊರಕೇರಿ ಓಣಿ ನಿವಾಸಿಗಳಿಗೆ ಅಂತಹ ಯಾವುದೇ ಸೌಲಭ್ಯ ದೊರಕಿಲ್ಲ ಬದಲಾಗಿ ಇಲ್ಲಿನ ಜನಪ್ರತಿನಿಧಿಗಳು ಈ ದುಸ್ಥಿತಿಯನ್ನ ಕಣ್ಣಾರೆ ಕಾಣದೆ ಬಂದಾಗ ಕೈ ಮುಗಿದು ಮರಳಿ ಮನೆ ಸೇರಿದ್ದಾರೆ.
ಹೌದು ! ನೀವಿಲ್ಲಿ ನೋಡುತ್ತಿರುವ ಕೊಳಚೆ ತುಂಬಿಕೊಂಡು ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರಿನಿಂದ ಸುತ್ತಲಿನ ನಿವಾಸಿಗಳಿಗೆ ಸೊಳ್ಳೆ ಕಾಟದ ಜೊತೆ ರೋಗದ ಬೀತಿಯೂ ಎದುರಾಗಿದ್ದು ನಮಗೆ ಚರಂಡಿ ವ್ಯವಸ್ಥೆ ಮಾಡಿಸಿ ಕೊಡ್ರಿ ಎಂದು ಇಲ್ಲಿನ ನಿವಾಸಿಗಳು ಪುರಸಭೆಗೆ ಮನವಿ ಸಲ್ಲಿಸಿದ್ರೂ ಪ್ರಯೋಜನ ಸಿಕ್ಕಿಲ್ಲ.
ಇನ್ನೂ ಅತಿಯಾದ ಮಳೆಗೆ ಹೊರಕೇರಿ ಓಣಿಯ ಮೇಲಿಂದ ಹರಿದು ಬರುವ ನೀರು ಮನೆಗಳಿಗೂ ನುಗ್ಗಿ ಆತಂಕ ಸೃಷ್ಟಿಸಿದ್ದರೆ ಇಂತಹ ಅವ್ಯವಸ್ಥೆಯಲ್ಲಿ ಹಂದಿಗಳ ಕಾಟ ಹೆಚ್ಚಾಗಿ ಸಣ್ಣ ಮಕ್ಕಳನ್ನ ಆಟೋಟಕ್ಕೆ ಹೊರಗಡೆ ಬಿಡಲು ಜನರು ಭಯ ಪಡುವ ಅನಿವಾರ್ಯತೆ ಎದುರಾಗಿದೆ ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಿ ಹದಗೆಟ್ಟ ರಸ್ತೆ ಹಾಗೂ ಚರಂಡಿ ಸರಿಪಡಿಸಿ ನಿಮ್ಮಂತೆ ಉತ್ತಮ ಪರಿಸರದಲ್ಲಿ ಬದುಕಲು ಇವ್ರಿಗೂ ಅವಕಾಶ ಮಾಡಿ ಕೊಡಿ ಎಂಬುದೇ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
19/10/2020 06:39 pm