ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್: ವಾಡಿಕೆಗಿಂತ ಕಡಿಮೆ ಮಳೆ

ಧಾರವಾಡ: ಧಾರವಾಡ ಜಿಲ್ಲೆ ರೆಡ್ ಅಲರ್ಟ್‌ನಲ್ಲಿ ಇಲ್ಲ. ನಮ್ಮ ಜಿಲ್ಲೆ ಯೆಲ್ಲೋ ಅಲರ್ಟ್‌ನಲ್ಲಿದೆ. ಜಿಲ್ಲೆಯಲ್ಲಿ ಇದುವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 177 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೆ 172 ಮಿಲಿ ಮೀಟರ್ ಮಳೆಯಾಗಿದೆ. ನಮ್ಮಲ್ಲಿ ಅತಿವೃಷ್ಠಿಯಾಗಿಲ್ಲ. ಕಡಿಮೆ ಮಳೆಯೂ ಆಗಿಲ್ಲ. ಕಳೆದ ಮೂರು ದಿನದಲ್ಲಿ 37 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟಾರೆ ಮಳೆ ಅವಧಿಯಲ್ಲಿ 157 ಮನೆಗಳಿಗೆ ಹಾನಿಯಾಗಿದೆ ಎಂದರು.

ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಕೊಡಲಾರಂಭಿಸಿದ್ದೇವೆ. ಜಿಲ್ಲೆಯಲ್ಲಿ ಮಾನವ ಹಾಗೂ ಪ್ರಾಣಿ ಹಾನಿ ಯಾವುದೂ ಸಂಭವಿಸಿಲ್ಲ. ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಹಾಗೂ ನೀರಸಾಗರದ ಜಲಾಶಯಮಟ್ಟದ ಮೇಲೆ ನಾವು ಗಮನವಿಟ್ಟಿದ್ದೇವೆ. ಅವುಗಳು ಭರ್ತಿಯಾಗುವುದು ಇನ್ನೂ ಬಾಕಿ ಇದೆ. ಯಾವುದೂ ಅಪಾಯದಮಟ್ಟ ಮೀರಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತಿದೆಯೋ ಅಲ್ಲೆಲ್ಲ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಶಾಲೆಗಳು ಸೋರುತ್ತಿವೆಯೋ ಅಲ್ಲಿ ಸಮುದಾಯ ಭವನಗಳನ್ನು ಬಳಕೆ ಮಾಡಲು ಸೂಚಿಸಿದ್ದೇವೆ ಎಂದರು.

ಬಿತ್ತನೆ ಬೀಜ, ಗೊಬ್ಬರದ ಕೊರತೆ ನಮ್ಮಲ್ಲಿ ಇಲ್ಲ. ಸೋರುತ್ತಿರುವ ಶಾಲೆಗಳಿಗೆ ಜಿಲ್ಲಾಡಳಿತದಿಂದ 2 ಲಕ್ಷ ಪರಿಹಾರ ಕೊಡಲಾಗುತ್ತದೆ. ಈಗಾಗಲೇ ಈ ಸಂಬಂಧ ಪಿಡಬ್ಲುಡಿಗೆ ಸೂಚನೆ ನೀಡಲಾಗಿದೆ. ಮುಂದಿನ ಐದು ದಿನಗಳ ಕಾಲ ನಮ್ಮ ಜಿಲ್ಲೆ ಯಲ್ಲೋ ಅಲರ್ಟ್‌ನಲ್ಲಿ ಇರಲಿದೆ. ಸದ್ಯಕ್ಕೆ ಎನ್‌ಡಿಆರ್‌ಎಫ್ ನಿಂದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ನೀಡುತ್ತಿದ್ದೇವೆ. ಆದರೆ, ಸಂತ್ರಸ್ಥರು ಈ ಪರಿಹಾರ ಕಡಿಮೆಯಾಗುತ್ತದೆ ಎನ್ನುತ್ತಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವದು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಬುಧವಾರ ಸಭೆ ಕೂಡ ನಡೆಸಲಿದ್ದಾರೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯಿಂದ ಯಾರೂ ಅಮರನಾಥಕ್ಕೆ ಹೋಗಿಲ್ಲ. ಈ ಸಂಬಂಧ ಸಹಾಯವಾಣಿ ಸಹ ಆರಂಭಿಸಿದ್ದೇವೆ. ಆದರೆ, ಇದುವರೆಗೂ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಹಾಗೇನಾದರೂ ಹೋಗಿದ್ದರೆ ನಾವು ಮತ್ತು ಸರ್ಕಾರ ಅವರ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

11/07/2022 06:21 pm

Cinque Terre

42.38 K

Cinque Terre

7

ಸಂಬಂಧಿತ ಸುದ್ದಿ