ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುಬ್ಬಳ್ಳಿಯ ಅಂದವನ್ನು ಹಾಳು ಮಾಡುತ್ತಿವೆ ಹರಿದೋದ ಬ್ಯಾನರ್‌ಗಳು !

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ರಸ್ತೆಗಳು, ಒಳ ರಸ್ತೆಗಳು, ಫುಟಪಾತ್‌ಗಳನ್ನು ಕಿತ್ತು ಹಾಕಿ ಮೊದಲೆ ಧೂಳಿನಿಂದ ನಗರದ ಅಂದ ಹದಗೆಟ್ಟಿದೆ. ಅದರಲ್ಲಿ ಈ ಬ್ಯಾನರ್‌ಗಳು ಇನ್ನಷ್ಟು ನಗರದ ಅಂದವನ್ನು ಹಾಳು ಮಾಡುತ್ತಿವೆ.

ಹೌದು. ಜಾಹೀರಾತಿಗಾಗಿ ನಗರದಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕುತ್ತಾರೆ. ಆದರೆ ಅವಧಿ ಮುಗಿದ ನಂತರ ಅವುಗಳನ್ನು ತೆರವುಗೋಳಿಸುವುದಿಲ್ಲಾ. ಅವುಗಳು ಗಾಳಿಗೆ,ಮಳೆಗೆ ಹರಿದು ಹೋಗುವ ಜನರ ಜೀವನಕ್ಕೆ ಕುತ್ತಾಗಿವೆ. ಹೀಗೆ ಬ್ಯಾನರ್ ಒಂದು ಹರಿದು ಗಾಳಿಗೆ ಹಾರಾಡುತ್ತಿರು ದೃಶ ಕಂಡು ಬಂದಿದ್ದು, ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ. ಇಲ್ಲಿ ಬೋರ್ಡ್ ಗೆ ಅಳವಡಿಸಿದ್ದ ಬ್ಯಾನರ್ ಹರಿದು ಛಿದ್ರ ಛಿದ್ರವಾಗಿದ್ದು ನಗರದ ಅಂದವನ್ನು ಅಷ್ಟೇ ಅಲ್ಲದೇ ಜನರ ಜೀವನಕ್ಕೆ ಕುತ್ತಾಗಿವೆ. ಸದ್ಯ ಮಳೆ ಮತ್ತು ಗಾಳಿ ಬರುವುದರಿಂದ ಹರಿದ ಈ ಬ್ಯಾನರ್‌ಗಳು ಬಹಳಷ್ಟು ಡೇಂಜರ್ ಆಗಿವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ನಗರದಲ್ಲಿ ಇದೆ ತರಹ ಹಲವು ಕಡೆಗೆ ಬ್ಯಾನರಗಳು ಹರಿದು ಹೋಗಿದ್ದು, ಬ್ಯಾನರ್ ಅಳವಡಿಕೆಗೆ ಗುತ್ತಿಗೆ ಪಡೆದ ಮಾಲೀಕರಿಗೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಾಗಿದೆ. ಮತ್ತು ಬ್ಯಾನರ್ ಅಳವಡಿಕೆಗೆ ಅವಧಿ ಮುಗಿದ ಗುತ್ತಿಗೆದಾರರನ್ನು ಬದಲಿಸುವಲ್ಲಿ ಪಾಲಿಕೆ ಅಧಿಕಾರಿಗಳು ನಿಗಾವಹಿಸಿ ನಗರದ ಅಂದ ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ.

Edited By :
Kshetra Samachara

Kshetra Samachara

04/05/2022 12:16 pm

Cinque Terre

43.67 K

Cinque Terre

2

ಸಂಬಂಧಿತ ಸುದ್ದಿ