ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಡಿತರ ಚೀಟಿ ಹೊಂದಿದ್ದ ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಆಹಾರ ಇಲಾಖೆ

ಧಾರವಾಡ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ ಆದ್ರೆ ಅಂತಹ ಸರ್ಕಾರಿ ನೌಕರರೇ ಸರ್ಕಾರಕ್ಕೆ ಮೋಸ ಮಾಡ್ತಿದ್ದಾರೆ. ಸರ್ಕಾರದ ಸಂಬಳವಿದ್ದರೂ ಬಡವರಿಗೆ ನೀಡುವ ಸೌಲಭ್ಯವನ್ನು ಪಡೆದು ದೊಡ್ಡ ಮೋಸ ಮಾಡಿದ್ದಾರೆ. ಅದು ಹೇಗೆ ಗೊತ್ತಾ? ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಸರ್ಕಾರ ಬಡವರಿಗೆ ಅಂತಾ ಅನೇಕ ಯೋಜನೆಗಳನ್ನು ನೀಡುತ್ತಿದೆ. ಆದ್ರೆ ಇಂತಹ ಕೆಲ ಸರ್ಕಾರದ ಯೋಜನೆಗಳು ಸರ್ಕಾರಿ ನೌಕರರ ಪಾಲಾಗುತ್ತಿವೆ. ಹೀಗಾಗಿ ಎಚ್ಚೆತ್ತುಕೊಂಡ ಆಹಾರ ಇಲಾಖೆ, ಅಂತವರ ವಿರುದ್ಧ ಸಮರ ಸಾರಿ ಇದೀಗ ಸುಳ್ಳು ಮಾಹಿತಿ ನೀಡಿ ಪಡಿತರ ದುರ್ಬಳಕೆ ಮಾಡಿಕೊಂಡ ಸರ್ಕಾರಿ ನೌಕರರಿಗೆ ಇಲಾಖೆ ಶಾಕ್ ನೀಡಿದೆ. 339 ನೌಕಕರರಿಂದ 36.73 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ.

339 ಜನ ಸರ್ಕಾರಿ ನೌಕರರು, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದವರೆಂದು ತಪ್ಪು ಮಾಹಿತಿ ನೀಡಿ ಪಡಿತರ ಪಡೆದುಕೊಳ್ಳುತ್ತಿದ್ದರು. ಧಾರವಾಡ ಜಿಲ್ಲೆಯ 339 ಜನ ಸರ್ಕಾರಿ ನೌಕರರನ್ನು ಪತ್ತೆ ಮಾಡಿದ ಆಹಾರ ಇಲಾಖೆ, ಅವರ ವಿರುದ್ಧ ಕ್ರಮ ಕೈಗೊಂಡಿದೆ.

ಬೈಟ್ 2: ವಿನೋದ್, ಆಹಾರ ಇಲಾಖೆ ಡಿಡಿ

ಸರ್ಕಾರಿ ನೌಕರರಾಗಿದ್ದರೂ ವೇತನ, ಆದಾಯ ಮರೆಮಾಚಿ ಪಡಿತರ ಪಡೆಯುತ್ತಿರುವವರನ್ನು ಪತ್ತೆ ಮಾಡಲು ಅಂದೋಲನ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಆದೇಶಿಸಿತ್ತು. ವಿವಿಧ ಇಲಾಖೆಗಳು, ಅರೆ ಸರ್ಕಾರಿ ನೌಕರರು ಹಾಗೂ ನಿಗಮಗಳಿಂದ ಮಾಹಿತಿ ಕಲೆ ಹಾಕಿ ಜಿಲ್ಲೆಯಲ್ಲಿ ಅಂತಹ 339 ಸರ್ಕಾರಿ ನೌಕರನ್ನು ಪತ್ತೆ ಮಾಡಿದೆ. ಇವರು ಬಿಪಿಎಲ್ ಕಾರ್ಡ್ ಪಡೆದು ವರ್ಷಗಳಿಂದ ಪಡಿತರ ಧಾನ್ಯ ಪಡೆದಿರುವುದನ್ನು ಪತ್ತೆ ಮಾಡಲಾಗಿದೆ.

ಇಂಥ ನೌಕರರು ಎಷ್ಟು ಪಡಿತರ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿ ಈವರೆಗೆ 36,73,774 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಅಲ್ಲದೇ ಅವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಒಟ್ಟಿನಲ್ಲಿ ಸರ್ಕಾರದ ಸಂಬಳ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಸರ್ಕಾರಿ ನೌಕಕರಿಗೆ ಇದೀಗ ಆಹಾರ ಇಲಾಖೆ ಶಾಕ್ ನೀಡಿದೆ. ಬಡವರಿಗೆ ಸಿಗಬೇಕಾದ ಉಸೌಲಭ್ಯಗಳನ್ನು ಬಡವರಿಗೆ ಸಿಗುವಂತೆ ಮಾಡಿದ ಆಹಾರ ಇಲಾಖೆ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Somashekar
Kshetra Samachara

Kshetra Samachara

29/09/2022 05:10 pm

Cinque Terre

31.44 K

Cinque Terre

5

ಸಂಬಂಧಿತ ಸುದ್ದಿ